Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬಾಂಗ್ಲಾಕ್ಕೆ ಅಪ್ಪಳಿಸಿದ ಮೋರಾ ಚಂಡಮಾರುತ, 3 ಲಕ್ಷ ಜನರ ಸ್ಥಳಾಂತರ

ಢಾಕಾ: ಗಂಟೆಗೆ 150 ಕಿ.ಮೀ. ವೇಗದಲ್ಲಿ ಮುನ್ನುಗ್ಗಿ ಬಂದ ಮೋರಾ ಚಂಡಮಾರುತ ಇಂದು ಬಾಂಗ್ಲಾದೇಶದ ಮೇಲೆ ಅಪ್ಪಳಿಸಿತು. ವಿನಾಶಕಾರಿಯಾಗಿರುವ ಮೋರಾ ಚಂಡಮಾರುತದ ಮಾರಕ ಹೊಡೆತಕ್ಕೆ ನೂರಾರು ಮನೆಗಳು ಹಾನಿಗೀಡಾಗಿವೆ; ಕರಾವಳಿ ಪ್ರದೇಶಗಳ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಾಗಿದ್ದರೂ ಯಾವುದೇ ಪ್ರಾಣ ಹಾನಿ ಆಗಿರುವ ವರದಿಗಳು ಈ ವರೆಗೆ ಬಂದಿಲ್ಲ.

ಬಾಂಗ್ಲಾದೇಶದ ಹವಾಮಾನ ಇಲಾಖೆಯ ವಿಶೇಷ ಬುಲೆಟಿನ್‌ ಪ್ರಕಾರ ಮೋರಾ ಚಂಡಮಾರುತ ಉತ್ತರ ಕೊಲ್ಲಿಯ ಉತ್ತರಕ್ಕೆ ಸಾಗುತ್ತಿದ್ದು ಅದು ಚಿತ್ತಗಾಂಗ್‌ – ಕೋಕ್ಸ್‌ ಬಜಾರ್‌ ಕರಾವಳಿಯನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಟಿದೆ. ಇಲ್ಲಿಂದ ಅದು ಉತ್ತರಾಭಿಮುಖವಾಗಿ ಸಾಗುತ್ತಿದೆ ಎಂದು ಬುಲೆಟಿನ್‌ ತಿಳಿಸಿದೆ.

ಪ್ರಬಲವಾದ ಗಾಳಿಯೊಂದಿಗೆ ಮೋರಾ ಚಂಡಮಾರುತವು ಉತ್ತರ ಕೊಲ್ಲಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಬಾಂಗ್ಲಾದೇಶದ ಸಾಗರ ಬಂದರುಗಳ ಉದ್ದಕ್ಕೂ ಜಡಿ ಮಳೆಯನ್ನು ಉಂಟು ಮಾಡಲಿದೆ ಎಂದು ಡೈಲಿ ಸ್ಟಾರ್‌ ವರದಿ ಮಾಡಿದೆ.

ಗಾಳಿಯ ವೇಗವು ಗಂಟೆಗೆ 130ರಿಂದ 150 ಕಿ.ಮೀ. ವೇಗದಲ್ಲಿದ್ದು ವ್ಯಾಪಕ ಹಾನಿ ಉಂಟುಮಾಡುವಷ್ಟು ಅದು ಪ್ರಬಲವಾಗಿರುತ್ತದೆ ಎಂಬ ಮುನ್ನೆಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಚಿತ್ತಗಾಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಾಕ್ಸ್‌ ಬಜಾರ್‌ ವಿಮಾನ ನಿಲ್ದಾಣಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಎಲ್ಲ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಗಿದೆ.

No Comments

Leave A Comment