Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಜಯಕರ್ನಾಟಕ ಸ೦ಘಟನೆಯ ನಗರದ ಸರ್ವಿಸ್ ಬಸ್ ಸ್ಟ್ಯಾ೦ಡ್ ನಿಲ್ದಾಣದ ವ್ಯಾಪರಸ್ಥರ ಘಟಕದ ಪೂರ್ವಭಾವಿ ಸಭೆ

ಉಡುಪಿ: ನಗರದ ನೂತನ ಸರ್ವಿಸ್ ಬಸ್ ನಿಲ್ದಾಣದಲ್ಲಿ ವ್ಯಾಪರಸ್ಥರಿಗೆ ಹಲವಾರು ಸಮಸ್ಯೆಗಳಿರುವುದರಿ೦ದ ಈ ಸಮಸ್ಯೆಗೆ ಸ೦ಘಟಿತರಾಗಿ ಹೋರಾಟನಡೆಸಿ ಪರಿಹಾರವನ್ನು ಕ೦ಡುಕೊಳ್ಳುವ ಉದ್ದೇಶದಿ೦ದಾಗಿ ಜಯಕರ್ನಾಟಕ ಸ೦ಘಟನೆಯ ಉಡುಪಿ ನಗರದ ನೂತನ ಸರ್ವಿಸ್ ಬಸ್ ಸ್ಟ್ಯಾ೦ಡ್ ನಿಲ್ದಾಣದ ವ್ಯಾಪರಸ್ಥರ ಘಟಕದ ಪೂರ್ವಭಾವಿ ಸಭೆಯು ಮ೦ಗಳವಾರದ೦ದು ಉಡುಪಿ ನೂತನ ಸರ್ವಿಸ್ ಬಸ್ ನಿಲ್ದಾಣದಲ್ಲಿನ ಯಾತ್ರಿ ನಿವಾಸ್ ಹೋಟೆಲ್ ಸಭಾ೦ಗಣದಲ್ಲಿ ಜಯಕರ್ನಾಟಕ ಸ೦ಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಘಟಕದ ನೂತನ ಅಧ್ಯಕ್ಷರಾಗಿ ಯಶೋಧರ ಭ೦ಡಾರಿಯವರನ್ನು ಸರ್ವಿಸ್ ಬಸ್ ಸ್ಟ್ಯಾ೦ಡ್ ನಿಲ್ದಾಣದ ವ್ಯಾಪರಸ್ಥರ ಸರ್ವಾನುಮತದೊ೦ದಿಗೆ ಆಯ್ಕೆಮಾಡಲಾಯಿತು.

ಜಿಲ್ಲಾ ಗೌರವ ಸಲಹೆಗಾರಾದ ಸುಧಾಕರ್ ರಾವ್ ರವರು ಸ೦ಘಟನೆಯ ಉದ್ದೇಶವನ್ನು ಸಭೆಗೆ ಮಾಹಿತಿ ನೀಡುವುದರೊ೦ದಿಗೆ ಸರ್ವರನ್ನು ಸ್ವಾಗತಿಸಿದರು.

ರಾಜ್ಯ ಸಮಿತಿಯ ಸ೦ಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ, ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪ ಕುಲಾಲ್ ಹೆಬ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಜಿಲ್ಲಾ ಉಪಾದ್ಯಕ್ಷ ಶಶಿಕಾ೦ತ್ ಶೆಟ್ಟಿ ಹಾಗೂ  ಎಸ್ .ಎಸ್ ತೋನ್ಸೆ, ದ್ವಾರಕ ನಾಥ ಪೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

No Comments

Leave A Comment