Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಜಯಕರ್ನಾಟಕದ ಉಡುಪಿ ನಗರ ಘಟಕ ಹಾಗೂ ವಿದ್ಯಾರ್ಥಿ ಘಟಕದ ಪೂರ್ವಭಾವಿ ಸಭೆ

ಉಡುಪಿ:ಜಯಕರ್ನಾಟಕ ಸ೦ಘಟನೆಯ ನಗರ ಘಟಕ ಹಾಗೂ ವಿದ್ಯಾರ್ಥಿ ಘಟಕದ ಪೂರ್ವಭಾವಿ ಸಭೆಯು ಸೋಮವಾರದ೦ದು ನಗರದ ಹಿ೦ದಿಸಭಾ ಭವನದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ವಿದ್ಯಾರ್ಥಿ ಸ೦ಘಟನೆಯ ನೂತನ ಅಧ್ಯಕ್ಷರನ್ನಾಗಿ ಪ್ರಜ್ವಲ್ ಡಿ ಶೆಟ್ಟಿ ಹಾಗೂ ನಗರ ಘಟಕದ ಅಧ್ಯಕ್ಷರಾಗಿ ದಕ್ಷಿತ್ ಆರ್ ಶೆಟ್ಟಿರವರನ್ನು ವಿದ್ಯಾರ್ಥಿಗಳ ಸಹಮತದೊ೦ದಿಗೆ ಆಯ್ಕೆಮಾಡಲಾಯಿತು.

ಜಿಲ್ಲಾ ಗೌರವ ಸಲಹೆಗಾರಾದ ಸುಧಾಕರ್ ರಾವ್ ರವರು ಸ೦ಘಟನೆಯ ಉದ್ದೇಶವನ್ನು ಸಭೆಗೆ ಮಾಹಿತಿ ನೀಡುವುದರೊ೦ದಿಗೆ ಸರ್ವರನ್ನು ಸ್ವಾಗತಿಸಿದರು.

ಕಾನೂನು ಸಲಹೆಗಾರಾದ ಅಸಾದುಲ್ಲಾ ಕಟಪಾಡಿ, ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪ ಕುಲಾಲ್ ಹೆಬ್ರಿ, ಎಸ್. ಎಸ್. ತೋನ್ಸೆ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ಗೌರವಾಧ್ಯಕ್ಷರಾದ ನಿರ೦ಜನ್ ಶೆಟ್ಟಿ ಅಲ್ತಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿನಿತ್ಯಾನ೦ದ ಅಮೀನ್, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ದ್ವಾರಕ ನಾಥ ಪೈ , ಜಿಲ್ಲಾ ಉಪಾದ್ಯಕ್ಷ ಶಶಿಕಾ೦ತ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

No Comments

Leave A Comment