Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಮ೦ಗಳವಾರ ರಾಜ್ಯದೆಲ್ಲೆಡೆ ಹೋಟೆಲ್ ಮತ್ತು ಮೆಡಿಕಲ್ ಶಾಪ್ ಬ೦ದ್…

ನವದೆಹಲಿ: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ ಸರ್ಕಾರದ ನಿಲುವನ್ನು ಕ್ರೀಡಾ ಸಚಿವ ವಿಜಯ್ ಗೋಯಲ್ ಪುನರುಚ್ಚರಿಸಿದ್ದಾರೆ. ಗಡಿಯಲ್ಲಿ ಭಯೋತ್ಪಾದನೆ ನಿರಂತರವಾಗಿ ನಡೆಯುತ್ತಿರುವಾಗ ಪಾಕಿಸ್ತಾನದ ಜೊತೆ ಕ್ರಿಕೆಟ್ ಪಂದ್ಯ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2007 ರಿಂದ ಭಾರತ ತಂಡ ಯಾವುದೇ ಪಾಕ್ ಜೊತೆ ಯಾವುದೇ ಪಂದ್ಯದ್ಲಲಿ ಭಾಗಿಯಾಗಿಲ್ಲ,  ಆಧರೆ 2012/13 ರಲ್ಲಿ  ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡು ಮೂರು ಅಂತರರಾಷ್ಟ್ರೀಯ ಏಕದಿನ  ಹಾಗೂ ಎರಡು ಟಿ-20 ಪಂದ್ಯಗಳನ್ನಾಡಿತ್ತು.

ಯಾವುದೇ ಸರಣಿಯ ಬಗ್ಗೆ ಪಾಕ್ ಜೊತೆ ಪ್ರಸ್ತಾವನೆಗೂ ಮುನ್ನ ಬಿಸಿಸಿಐ ಭಾರತೀಯ ಸರ್ಕಾರದ ಕಡ್ಜಾಯವಾಗಿ ಚರ್ಚಿಸಬೇಕು ಎಂದು ವಿಜಯ್ ಗೋಯೆಲ್ ಹೇಳಿದ್ದಾರೆ. ಕ್ರಿಕೆಟ್ ಮತ್ತು ಭಯೊತ್ಪಾದನೆ ಒಟ್ಟೊಟ್ಟಿಗೆ ನಡೆಯಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರವಾದವನ್ನು ಹರಡುತ್ತಿದೆ. ಪರಿಸ್ಥಿತಿ ಈ ರೀತಿ ಇರುವಾಗ ನಾವು ಯಾವುದೇ ದ್ವಿಪಕ್ಷೀಯ ಸರಣಿ ಪಂದ್ಯಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಪಂದ್ಯವಾಡಲು ಭಾರತಕ್ಕೆ ಯಾವುದೇ ವಿರೋಧವಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಹೇಳಿಕೆ ಹಿನ್ನೆಲೆಯಲ್ಲಿ ವಿಜಯ್ ಗೋಯೆಲ್ ಪ್ರತಿಕ್ರಿಯಿಸಿದ್ದಾರೆ.

ನಮಗೆ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡಲು ಯಾವುದೇ ತೊಂದರೆಯಿಲ್ಲ, ಆದರೇ  ಇದಕ್ಕೆ ಸರ್ಕಾರದ ಅನುಮತಿಯಿಲ್ಲದೇ ಹೋದರೆ ಯಾವುದೇ ಸರಣಿಯೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

No Comments

Leave A Comment