Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಎರಡು ಕನಸು ಚಿತ್ರದ ನಿರ್ದೇಶಕ ಮದನ್ ಬಂಧನ

ಬೆಂಗಳೂರು: ಎರಡು ಕನಸು ಚಿತ್ರದ ಪ್ರಮೋಶನ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಚಾರಕ ಪರಮೇಶ್ ಎಂಬುವರನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮದನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಬಸವೇಶ್ವರ ನಗರದ ಮನೆಯಿಂದ ಪರಮೇಶ್ ರನ್ನು ಮದನ್ ತನ್ನ ಸ್ನೇಹಿತರೊಂದಿಗೆ ಅಪಹರಣ ಮಾಡಿಸಿದ್ದ ಮೂರು ದಿನ ಕಳೆದರು ಪರಮೇಶ್ ಮನೆಗೆ ಬಾರದಿದ್ದರಿಂದ ಪರಮೇಶ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮಾಗಡಿ ರಸ್ತೆ ಪೊಲೀಸರು ಮದನ್ ನನ್ನು ಬಂಧಿಸಿದ್ದಾರೆ.

ಎರಡು ಕನಸು ಚಿತ್ರದ ಪ್ರಮೋಶನ್ ಗಾಗಿ ಮದನ್ ಪರಮೇಶ್ ಗೆ 16.3 ಲಕ್ಷ ರುಪಾಯಿ ನೀಡಿದ್ದರು. ಚಿತ್ರ ಇತ್ತೀಚೆಗಷ್ಟೇ ತೆರೆಕಂಡು ಸೋಲು ಕಂಡಿತ್ತು. ಈ ಸೋಲಿಗೆ ಪ್ರಮೋಶನ್ ಸರಿಯಾಗಿ ಮಾಡದೇ ಇರುವುದೇ ಕಾರಣ ಎಂದು ನಿರ್ದೇಶಕ ಮದನ್ ಪರಮೇಶ್ ರನ್ನು 8 ಲಕ್ಷ ರುಪಾಯಿ ವಾಪಸ್ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಪರಮೇಶ್ ನಿರಾಕರಿಸಿದ್ದರಿಂದ ಅವರನ್ನು ಅಪಹರಣ ಮಾಡಲಾಗಿದೆ ಎಂದು ಹೇಳಲಾಗಿದೆ.

No Comments

Leave A Comment