Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮತ್ತೆ ಮಳೆ ಅಬ್ಬರ:ಬೆಂಗಳೂರಿಗರಲ್ಲಿ ಆತಂಕ; ಇಂದೂ ಭಾರೀ ಮಳೆ ಎಚ್ಚರಿಕೆ

 ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಹೀಗಾಗಿ ನಗರದಾದ್ಯಂತ 65ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

ಇಂದೂ ದಟ್ಟ ಮೋಡ ಕವಿದ ವಾತಾವರಣವಿದ್ದು , 2 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂತಾಗಿ ತಗ್ಗು ಪ್ರದೇಶದ ಜನರಲ್ಲಿ ಆತಂಕ ಮೂಡಿದೆ.

ಮಳೆ ಹಿನ್ನೆಲೆಯಲ್ಲಿ ಬಹುತೇಕ ಕಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ಭಾಗಶಃ ಬೆಂಗಳೂರು ಕತ್ತಲಿನಲ್ಲೇ ರಾತ್ರಿ ದೂಡಬೇಕಾಯಿತು.

ರಾತ್ರಿ 8 ಗಂಟೆ ನಂತರ ಮಳೆ ಆರಂಭವಾಯಿತು. ಬಿರುಸಾಗಿಯೇ ಶುರುವಾದ ಮಳೆಗೆ ಕಾರ್ಪೋರೇಷನ್‌ ವೃತ್ತ, ಮೈಸೂರು ಬ್ಯಾಂಕ್‌, ಕೆಂಪೇಗೌಡ ಬಸ್‌ ನಿಲ್ದಾಣ, ಶಾಂತಿನಗರ, ಸುಲ್ತಾನ್‌ಪಾಳ್ಯ, ಬಿಟಿಎಂ ಬಡಾವಣೆ, ಸಂಜಯನಗರ, ಮಿಷನ್‌ ರಸ್ತೆ, ಸಂಪಂಗಿರಾಮನಗರ, ಪೂರ್ಣಿಮಾ ಚಿತ್ರಮಂದಿರ, ಕಾರ್ಪೋರೇಷನ್‌ ವೃತ್ತ ಸೇರಿ ಹಲವು ಕಡೆಗಳಲ್ಲಿ 60 ಕ್ಕೂ ಹೆಚ್ಚಿನ ಮರಗಳು ಧರೆಗುರುಳಿವೆ.

 ಪೂರ್ಣಿಮಾ ಚಿತ್ರಮಂದಿರದ ಬಳಿ ಮರವೊಂದು ವಿದ್ಯುತ್‌ ಕಂಬದ ಮೇಲೆ ವಾಲಿಕೊಂಡಿತ್ತು. ಅದರಪಕ್ಕದಲ್ಲೇ ಸಾಗಬೇಕಿದ್ದ ವಾಹನ ಸವಾರರು ಭಯಭೀತರಾಗಿದ್ದರು. ವಾಹನ ದಟ್ಟಣೆಯೂ ಉಂಟಾಗಿತ್ತು. ಬೆಸ್ಕಾಂ ವಿದ್ಯುತ್‌ ಕಡಿತಗೊಳಿಸಿತು. ಪರಿಣಾಮ ಸುತ್ತಮತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಕಾವಲ್‌ ಭೈರಸಂದ್ರದಲ್ಲಿ 4 ಕಡೆಗಳಲ್ಲಿ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸ್ಥಗಿತಗೊಂಡಿತ್ತು.

ಹಾಗೆಯೇ, ಮೈಕೋಲೇಔಟ್‌, ಕಾರ್ಪೋರೇಷನ್‌ ವೃತ್ತ, ಕಸ್ತೂರಬಾ ರಸ್ತೆಗಳಲ್ಲಿ ಭಾರಿ ಗಾತ್ರದ ಮರಗಳು ಕಾರುಗಳ ಮೇಲೆ ಬಿದ್ದಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು, ಕೆ.ಆರ್‌.ವೃತ್ತದ ಅಂಡರ್‌ಪಾಸ್‌ ಶೇಖರಣೆಗೊಂಡಿದ್ದ ನೀರಿನಲ್ಲಿ ಇಂಡಿಕಾ ಕಾರೊಂದು ಮುಳುಗಡೆಯಾಗಿತ್ತು. ಕೊನೆಗೆ ಹಲಸೂರು ಗೇಟ್‌ ಪೊಲೀಸರ ನೆರವಿನಿಂದ ಕಾರನ್ನು ಹೊರಗೆ ತೆಗೆಯಲಾಯಿತು. ಇದರೊಂದಿಗೆ ಬನಶಂಕರಿಯ ಯಾರಬ್‌ ನಗರದ ತಗ್ಗು ಪ್ರದೇಶದಲ್ಲಿರುವ ವಸತಿ ಪ್ರದೇಶ, ಮಡಿವಾಳ ಬಳಿಯ ಮಾರುತಿನಗರ, ಕಾಡುಗೋಡಿ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು.

ನಗರದ ಪ್ರಮುಖ ರಸ್ತೆಗಳಾದ ಶಾಂತಿನಗರ ಮೇಲ್ಸೇತುವೆ, ವಿಠuಲ್‌ ಮಲ್ಯ ರಸ್ತೆ, ಕಾವೇರಿ ಜಂಕ್ಷನ್‌, ಕಬ್ಬನ್‌ ಪಾರ್ಕ್‌ ರಸ್ತೆ, ಕಸ್ತೂರಿ ಬಾ ನಗರ, ಸ್ಯಾಂಕಿ ರಸ್ತೆ ಅಂಡರ್‌ ಪಾಸ್‌, ಟೌನ್‌ಹಾಲ್‌ ರಸ್ತೆ, ಮೆಜೆಸ್ಟಿಕ್‌, ಮಲ್ಲೇಶ್ವರ, ಮೈಸೂರು ರಸ್ತೆ, ಕನಕಪುರ ರಸ್ತೆ, ಕೋರಮಂಗಲ, ಹಲಸೂರು ರಸ್ತೆ, ಹಳೆ ಮದ್ರಾಸ್‌ ರಸ್ತೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

No Comments

Leave A Comment