Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲ್ಲಡ್ಕ:ಯುವಕನಿಗೆ ಇರಿತ,ಉದ್ವಿಗ್ನ ವಾತಾವರಣ, ಅಂಗಡಿ ಮುಂಗಟ್ಟು ಬಂದ್‌

ಬಂಟ್ವಾಳ: ಇಲ್ಲಿನ ಕಲ್ಲಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ಯುವಕನೊಬ್ಬನಿಗೆ ವ್ಯಕ್ತಿಯೊಬ್ಬ ಇರಿದು ಪರಾರಿಯಾಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ.

ಮಹಮದ್‌ ಶಾಹಿರ್‌ ಎಂಬ ಯುವಕ ನಮಾಝ್ ಮುಗಿಸಿ ಬರುತ್ತಿದ್ದ ವೇಳೆ  ಕಾರಿನಲ್ಲಿ ಬಂದ ಅಪರಿಚಿತ ಯುವಕ ಇರಿದು ಪರಾರಿಯಾಗಿದ್ದಾನೆ. ಶಾಹಿರ್‌ನನ್ನು ತುಂಬೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನ ರಸ್ತೆಗೆ ಅಡ್ಡವಾಗಿಟ್ಟ ವಿಚಾರದಲ್ಲಿ ಗಲಾಟೆ ನಡೆದು ಮಾತಿಗೆ ಮಾತು ಬೆಳೆದು ಇರಿತ ನಡೆಸಲಾಗಿದೆ ಎಂದು ವರದಿಯಾಗಿದೆ.

ಕೋಮುಸೂಕ್ಷ್ಮ ಕಲ್ಲಡ್ಕದಲ್ಲಿ ಘಟನೆಯ ಬಳಿಕ ಅಂಗಡಿ ಮುಂಗಟ್ಟುಗಳನ್ನು ಮುಂಜಾಗೃತಾ ಕ್ರಮವಾಗಿ ಮುಚ್ಚಲಾಗಿದೆ. ವಾಹನ ಸಂಚಾರ ಎಂದಿನಂತೆ ಇದೆ. ಹೆದ್ದಾರಿಯಲ್ಲಿ ಸಂಚಾರ ಎಂದಿನಂತೆ ಇದೆ.

ಬಂಟ್ವಾಳ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ, ಬಿಗಿ ಭದ್ರತೆ ಕೈಗೊಂಡಿದ್ದಾರೆ.

No Comments

Leave A Comment