Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಪತ್ತೆಯಾಗದ ಪೈಲೆಟ್‌ಗಳು ನಾಪತ್ತೆಯಾಗಿದ್ದ ಸುಖೋಯ್‌ ಯುದ್ಧ ವಿಮಾನದ ಅವಶೇಷ ಪತ್ತೆ

ನವದೆಹಲಿ: ಮೇ 23ರಂದು ಅಸ್ಸಾಂನ ತೇಜ್‌ಪುರದಿಂದ ಹೊರಟಿದ್ದ ಭಾರತೀಯ ವಾಯುಪಡೆಯ ಸುಖೋಯ್–30 ಎಂಕೆಐ ಯುದ್ಧವಿಮಾನ ರೇಡಾರ್ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಆದರೆ ಶುಕ್ರವಾರ ವಿಮಾನದ ಅವಶೇಷಗಳು ಪತ್ತೆಯಾಗಿವೆ.

‘ತೇಜ್‌ಪುರದಿಂದ 60 ಕಿ.ಮೀ ವ್ಯಾಪ್ತಿಯ ದಟ್ಟ ಆರಣ್ಯ ಪ್ರದೇಶದಲ್ಲಿ ಯುದ್ಧ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಈ ವಿಮಾನದಲ್ಲಿದ್ದ ಇಬ್ಬರು ಪೈಲೆಟ್‌ಗಳು ಬದುಕಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ’ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕೋಲ್ ಸಾಂಬಿತ್ ಘೋಷ್ ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ತೇಜ್​ಪುರದಿಂದ ಸುಖೋಯ್​ ವಿಮಾನ ಟೇಕ್​ ಆಫ್​ ಆಗಿತ್ತು. 11.30ರ ಸುಮಾರಿಗೆ ಅರುಣಾಚಲ ಪ್ರದೇಶದ ದೌಲಸಂಗ್​ ಪ್ರದೇಶದ ಸಮೀಪ ಯುದ್ಧ ವಿಮಾನ ರಡಾರ್​ ಸಂಪರ್ಕವನ್ನು ಕಡಿದುಕೊಂಡಿತ್ತು. ವಿಮಾನ ನಾಪತ್ತೆಯಾದ ಪ್ರದೇಶ ಚೀನಾದ ಗಡಿಗೆ ಸಮೀಪವಿತ್ತು.

No Comments

Leave A Comment