Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದ 118ನೇ ಭಜನಾ ಸಪ್ತಾಹದ ಆಮoತ್ರಣ ಪತ್ರಿಕೆ ಬಿಡುಗಡೆ-ಅಗಸ್ಟ್ 16ರಿ೦ದ ಭಜನಾ ಸಪ್ತಾಹ ಆರoಭ

ವಿಧ್ವಂಸಕ ಕೃತ್ಯ ಜಾರ್ಖಂಡ್‌ನಲ್ಲಿ ನಕ್ಸಲರ ದಾಳಿ: ಸರಕು ಸಾಗಣೆ ರೈಲಿನ ಸಿಗ್ನಲ್‌, ಸಂವಹನ ಸಾಧನ ಧ್ವಂಸ

ಜಾರ್ಖಂಡ್: ವಿಧ್ವಂಸಕ ಕೃತ್ಯ ಮುಂದುವರಿಸಿರುವ ನಕ್ಸಲರು ಜಾರ್ಖಂಡ್‌ನ ಬೋಕಾರೊದ ದುಮರಿ ಬಿಹಾರ ರೈಲುನಿಲ್ದಾಣದಲ್ಲಿ ಸರಕು ಸಾಗಣೆ ರೈಲಿನ ಸಿಗ್ನಲ್‌ ಮತ್ತು ಸಂವಹನ ವ್ಯವಸ್ಥೆ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

ಗುರುವಾರ ರಾತ್ರಿ 11.30ರ ಸುಮಾರಿಗೆ ರೈಲಿನಲ್ಲಿನ ಸಿಗ್ನಲ್‌ ವಾಹಕ ಮತ್ತು ಸಂವಹನ ಸಾಧನಗಳಿಗೆ ಬೆಂಕಿ ಹಚ್ಚಿರುವ ನಕ್ಸಲರು ಸರಕು ಸಾಗಣೆ ರೈಲಿನ ಸಂಪರ್ಕ ವ್ಯವಸ್ಥೆಗೆ ಹಾನಿ ಮಾಡಿದ್ದಾರೆ.

‘ನಕ್ಸಲರು ರಾತ್ರಿ 11.30ಕ್ಕೆ ರೈಲು ಎಂಜಿನ್‌ ಅನ್ನು ಧ್ವಂಸಗೊಳಿಸಿ, ಸಂವಹನ ವ್ಯವಸ್ಥೆಯನ್ನು ಸುಟ್ಟುಹಾಕಿದ್ದಾರೆ’ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಸಿಆರ್‌ಪಿಎಫ್‌ನ 26 ಬೆಟಾಲಿಯನ್‌ನ ಕಮಾಂಡೆಂಟ್‌ ಹಾಗೂ ಬೋರಾಕೊದ ಎಸ್‌ಪಿ ಸ್ಥಳಕ್ಕೆ ತೆರಳಿದ್ದು, ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.

No Comments

Leave A Comment