Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಕೂದಲೆಳೆ ಅಂತರದಲ್ಲಿ ಮಹಾರಾಷ್ಟ್ರ ಸಿಎಂ ಪಾರು!/Chopper carrying Fadnavis crash-lands, ‘absolutely safe’, tweets CM

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲಾತೂರ್ ಬಳಿ ಕ್ರಾಶ್ ಲ್ಯಾಂಡಿಂಗ್ ಆಗಿದ್ದು, ಅದೃಷ್ಟವಶಾತ್ ಅದರೊಳಗಿದ್ದ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.

ಮೂಲಗಳ ಪ್ರಕಾರ ಅಮೆರಿಕ ನಿರ್ಮಿತ ಸಿಕೋರ್ ಸ್ಕೈ ಹೆಲಿಕಾಪ್ಟರ್ ನಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಇತರೆ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಕಾರ್ಯಕ್ರಮದ ನಿಮಿತ್ತ ಲಾತೋರ್ ಮಾರ್ಗವಾಗಿ ಗಡ್  ಚಿರೋಲಿಗೆ ಹೆಲಿಕಾಪ್ಟರ್ ತೆರಳುತ್ತಿತ್ತು. ಕಾಪ್ಟರ್ ಟೇಕ್ ಆಫ್ ಆಗುತ್ತಿದ್ದಂತೆಯೇ ಅದರಲ್ಲಿನ ಗಾಳಿಯಂತ್ರದಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ ಕೂಡಲೇ ಪೈಲಟ್ ಕಾಪ್ಟರ್ ಅನ್ನು ಲ್ಯಾಂಡ್ ಮಾಡಲು ಮುಂದಾಗಿದ್ದಾನೆ.

ಈ ವೇಳೆ  ವಿಮಾನ ಪೈಲಟ್ ನಿಯಂತ್ರಣ ತಪ್ಪಿದ್ದು, ಕ್ರಾಶ್ ಲ್ಯಾಂಡ್ ಆಗಿದೆ.ಅದೃಷ್ಟವಶಾತ್ ಘಟನೆಯಲ್ಲಿ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಅವರ ತಂಡಕ್ಕೆ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನು ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಫಡ್ನವಿಸ್ ಅವರು, ಅದೃಷ್ಟವಶಾತ್ ನಾನು ಮತ್ತು ನನ್ನ  ತಂಡ ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಯಾರೂ ಹೆದರಬೇಕಿಲ್ಲ. ಘಟನೆಯಲ್ಲಿ ಓರ್ವ ಅಧಿಕಾರಿಗೆ ಸಣ್ಣ ಪ್ರಮಾಣದ ಪೆಟ್ಟಾಗಿದ್ದು ಬಿಟ್ಟರೇ ಬೇರೆ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.

ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯಿ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ಹೆಲಿಕಾಪ್ಟರ್ ನಲ್ಲಿನ ವಿಂಡ್ ಶೀಟ್ ನಲ್ಲಿನ ತಾಂತ್ರಿಕ ದೋಷವೇ ಘಟನೆಗೆ ಕಾರಣವಾಗಿದೆ. ಅಪಾಯದ ಮುನ್ಸೂಚನೆ  ಅರಿಯುತ್ತಿದ್ದಂತೆಯೇ ಪೈಲಟ್ ಕಾಪ್ಟರ್ ಲ್ಯಾಂಡ್ ಮಾಡಿದ್ದಾನೆ ಎಂದು ಹೇಳಿದೆ.

Maharashtra Chief Minister Devendra Fadnavis’ helicopter crash landed at Nilanga in Latur district on Thursday after it suffered a snag, but he escaped unhurt.

“Our helicopter did meet with an accident in Latur but me and my team is absolutely safe and ok. Nothing to worry,” Fadnavis tweeted after the mishap.

A senior official of the Directorate General of Civil Aviation said it was an accident and the chopper suffered substantial damage.

Fadnavis had gone to Latur in Marathwada for the Bharatiya Janata Party’s ‘Shivar Samwad Sabha’, a statewide campaign to reach out to farmers.

“I am safe. There was a minor accident involving the helicopter. People shouldn’t believe in rumours,” Fadnavis later told mediapersons.

The chopper developed a technical snag while taking off from the helipad at Nilanga where the chief minister had gone for an event.

“Nobody got hurt. My media advisor Ketan Pathak has suffered minor injuries. With the blessings of 11 crore people of Maharashtra, I am safe,” he told reporters at Nilanga.

He added that the pilot too had not been injured seriously.

“This is a new helicopter. We will seek information from police on this incident,” the chief minister said.

No Comments

Leave A Comment