Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಗನ್ ತೋರಿಸಿ ಪಾಕ್ ಯುವಕನ ಜೊತೆ ಬಲವಂತದ ಮದುವೆ: ತವರಿಗೆ ಮರಳಿದ ಭಾರತೀಯ ಮಹಿಳೆ ಉಜ್ಮಾ

ನವದೆಹಲಿ: ಗನ್ ತೋರಿಸಿ ಪಾಕ್ ಯುವಕನ ಜೊತೆ ಬಲವಂತದಿಂದ ಮದುವೆಯಾಗಿದ್ದ ಭಾರತೀಯ ಮಹಿಳೆ ಉಜ್ಮಾ ಅವರು ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿ ನೀಡಿದ ಬಳಿಕ ಗುರುವಾರ ಭಾರತಕ್ಕೆ ವಾಪಾಸಾಗಿದ್ದಾರೆ.

ನಿನ್ನೆಯಷ್ಟೇ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಇಸ್ಲಾಮಾಬಾದ್ ಹೈಕೋರ್ಟ್ ಭಾರತೀಯ ಮಹಿಳೆ ಉಜ್ಮಾ ಅವರು ತವರಿಗೆ ಮರಳಲು ಅನುಮತಿ ನೀಡಿತ್ತು. ನ್ಯಾಯಾಲಯದ ಅನುಮತಿಯಂತೆಯೇ ಬಿಗಿ ಭದ್ರತೆಯೊಂದಿಗೆ ವಾಘಾ ಗಡಿ ಮೂಲಕ ಉಜ್ಮಾ ಅವರು ಭಾರತಕ್ಕೆ ಬಂದಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಉಜ್ಮಾ ಅವರನ್ನು ಸ್ವಾಗತಿಸಿದ್ದಾರೆ, ಅಲ್ಲದೆ, ಭಾರತದ ಮಗಳು ಎಂದು ಕರೆದಿದ್ದಾರೆ.
ಪಾಕಿಸ್ತಾನದಲ್ಲಿ ಇಷ್ಟೆಲ್ಲಾ ಸಂಕಷ್ಟಗಳನ್ನು ಅನುಭವಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆಂದು ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ 20 ವರ್ಷದ ಭಾರತೀಯ ಮಹಿಳೆ ಉಜ್ಮಾ, ಪಾಕಿಸ್ತಾನ ಮೂಲದ ತಾಹಿರ್ ಅಲಿ ಎಂಬಾತ ಗನ್ ತೋರಿಸಿ ಬಲವಂತದಿಂದ ವಿವಾಹವಾಗಿದ್ದು, ಕಿರುಕುಳ ನೀಡುತ್ತಿದ್ದಾನೆಂದು ಆರೋಪ ಮಾಡಿದ್ದರು. ಈ ಸಂಬಂಧ ಪತಿ ತಾಹಿರ್ ಅಲಿ ವಿರುದ್ದ ಇಸ್ಲಾಮಾಬಾದ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ತಾಹಿಲ್ ಅಲಿ ಎಂಬ ಪಾಕಿಸ್ತಾನ ಮೂಲದ ವ್ಯಕ್ತಿ ತನಗೆ ಗನ್ ತೋರಿಸಿ ಬೆದರಿಕೆಯೊಡ್ಡಿ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡರು. ನನ್ನ ವಲಸೆ ದಾಖಲೆಗಳನ್ನು ಕಸಿದುಕೊಂಡಿದ್ದಾರೆಂದು ಹೇಳಿಕೊಂಡಿದ್ದರು. ಅಲ್ಲದೆ, ನೆರವಿಗೆ ಧಾವಿಸುವಂತೆ ಭಾರತೀಯ ರಾಯಭಾರಿ ಕಚೇರಿ ಬಳಿ ಮನವಿ ಮಾಡಿಕೊಂಡಿದ್ದರು.

ಪ್ರಕರಣ ಸಂಬಂಧ ನಿನ್ನೆಯಷ್ಟೇ ವಿಚಾರಣೆ ನಡೆಸಿದ್ದ ಇಸ್ಲಾಮಾಬಾದ್ ಉಜ್ಮಾ ಅವರಿಗೆ ಭಾರತಕ್ಕೆ ಮರಳಲು ಅನುಮತಿ ನೀಡಿದ್ದರು. ಅಲ್ಲದೆ, ವಾಘಾ ಗಡಿಗೆ ಹೋಗುವವರೆಗೂ ಉಜ್ಮಾ ಅವರಿಗೆ ಅಧಿಕಾರಿಗಳು ಭದ್ರತೆ ನೀಡಬೇಕು ಎಂದು ಆದೇಶಿಸಿದ್ದರು.

No Comments

Leave A Comment