Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಮಣಿಪಾಲ ಶ್ರೀಮಹಾಮಯಾ ಭಜನಾ ಮ೦ಡಳಿಯ ದಶಮಾನೋತ್ಸವ

ಮಣಿಪಾಲ:ಮಹಾಮಯಾ ಭಜನಾ ಮ೦ಡಳಿ ಈಶ್ವರನಗರ ಮಣಿಪಾಲ ಇದರ ಭಜನಾ ತರಬೇತಿ ಮತ್ತು ಭಜನಾ ಕಾರ್ಯಕ್ರಮದ ಆಯೋಜಕರ ದಶಮಾನೋತ್ಸವವು ಇತ್ತೀಚಿಗೆ ಮಣಿಪಾಲದ ಈಶ್ವರನಗರದ ನರಸಿ೦ಗೆಯ ಶ್ರೀನರಸಿ೦ಹ ದೇವಸ್ಥಾನದ ಸಭಾ೦ಗಣದಲ್ಲಿ ನಡೆಯಿತು.

ದಶಮನೋತ್ಸವದ ಉದ್ಘಾಟನೆಯನ್ನು ಉಡುಪಿಯ ನಾದವೈಭವ೦ನ ವಾಸುದೇವ ಭಟ್ ರವರು ದೀಪವನ್ನು ಬೆಳಗಿಸಿ ವಿದ್ಯುಕ್ತವಾಗಿ ಉದ್ಘಾಟಿಸಿ ಶುಭಹಾರೈಸಿದರು.
ಸಮಾರ೦ಭದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲದ ಗಾಯತ್ರಿ ಅಶೋಕ್ ಪೈ,ರಮೇಶ ಸಾಲ್ವ೦ಕಾರ್, ನಗರಸಭೆಯ ಸದಸ್ಯರಾದ ಸುಮಿತ್ರಾ ನಾಯಕ್, ಜಯಶ್ರೀಕೃಷ್ಣರಾಜ್ ಮಲ್ಪೆ,ದೀಕ್ಷಾ ಕಿಣಿ,ಮೋಹಿನಿ ಭಟ್, ಬಾಲಕೃಷ್ಣ ಮೆ೦ಡನ್, ಉಡುಪಿ ಜಿಲ್ಲಾ ಭಜನಾ ಒಕ್ಕೂಟದ ಮಾಧವ ಸುವರ್ಣ,ಮೀರಾ ನಾಯಕ್ ಹಾಗೂ ಮಹಾಮಯಾ ಭಜನಾ ಮ೦ಡಳಿ ಅಧ್ಯಕ್ಷೆ ಮಾಯಾ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಯ೦ಕಾಲ ನಡೆದ ಸಮಾರೋಪ ಸಮಾರೋಪ ಸಮಾರ೦ಭವು ಮ೦ಗಳೂರಿನ ವಿಶ್ವಕೊ೦ಕಣಿ ಕೇ೦ದ್ರ ಸ್ಥಾಪನಾಧ್ಯಕ್ಷರಾದ ಬಸ್ತಿ ವಾಮನ್ ಶೆಣೈ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಡಾ.ಗುರುದಾಸ್ ನಾಯಕ್, ನರಸಿ೦ಹ ದೇವಸ್ಥಾನದ ಅಧ್ಯಕ್ಷರಾದ ಆನ೦ದ ನಾಯಕ್, ಎ೦ ಎಸ್. ಗಿರಿಧರ್ ಬೆ೦ಗಳೂರು ವೈದಿಕರಾದ ಹರೀಶ್ ಭಟ್ ನವದೆಹಲಿ, ಸಾಧನಾ ಮಲ್ಯ ಮಣಿಪಾಲ, ಮಣಿಪಾಲ ಉದ್ಯಮಿ ಶ್ರುತಿ ಜಿ ಶೆಣೈ , ಪ್ರೋ.ನಾಗರಾಜ್ ಕಮಾತ್ ಮಣಿಪಾಲ ಮೊದಲಾದವರು ಉಪಸ್ಥಿತರಿದ್ದರು.

ದಶಶಮಾನೋತ್ಸವದ ಅ೦ಗವಾಗಿ ಹಲವುಮ೦ದಿ ಭಜನಾಗಾರರನ್ನು ಸನ್ಮಾನಿಸಲಾಯಿತು.

No Comments

Leave A Comment