Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಪ್ರೇಮ ವಿವಾಹ ತಾಯ್ನಾಡಿಗೆ ಮರಳಲು ಭಾರತೀಯ ಮಹಿಳೆಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ಅನುಮತಿ

ಇಸ್ಲಾಮಾಬಾದ್‌: ಭಾರತೀಯ ಮಹಿಳೆಯನ್ನು ದೇಶಕ್ಕೆ ಮರಳಲು ಇಸ್ಲಾಮಾಬಾದ್‌ ಹೈಕೋರ್ಟ್‌ ಅನುಮತಿ ನೀಡಿರುವುದಾಗಿ ವರದಿಯಾಗಿದೆ.

ಇದೇ ತಿಂಗಳು ಪಾಕಿಸ್ತಾನ ಪ್ರವಾಸದಲ್ಲಿದ್ದ ಉಜ್ಮಾ ಅವರನ್ನು ಮದುವೆಯಾಗುವಂತೆ ಪಾಕಿಸ್ತಾನಿ ಪ್ರಜೆ ತಾಹಿರ್‌ ಅಲಿ ಒತ್ತಾಯ ಪಡಿಸಿದ್ದಾಗಿ ಆರೋಪಿಸಲಾಗಿದೆ.

ಬಂದೂಕು ತೋರಿಸಿ ಮದುವೆಯಾಗುವಂತೆ ತಾಹಿರ್‌ ಅಲಿ ಬೆದರಿಸಿದ್ದರು ಎಂದು ಉಜ್ಮಾ ಪ್ರಕರಣ ದಾಖಲಿಸಿ ತಾಯ್ನಾಡಿಗೆ ಮರಳಲು ಅವಕಾಶ ಕೋರಿದ್ದರು. ತನ್ನ ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಅಲಿ ಮನವಿ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಇಸ್ಲಾಮಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಮೊಹಸಿನ್‌ ಅಕ್ತರ್‌ ಕಿಯಾನಿ, ಉಜ್ಮಾ ನವದೆಹಲಿಯವರಾಗಿದ್ದು ಇಚ್ಛಿಸಿದಾಗ ಭಾರತಕ್ಕೆ ಮರಳಲು ಸ್ವತಂತ್ರರು ಎಂದಿದ್ದಾರೆ. ಪೊಲೀಸ್‌ ಭದ್ರತೆಯೊಂದಿಗೆ ವಾಗಾ ಗಡಿ ಭಾಗ ತಲುಪಲಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಹಿನ್ನೆಲೆ: ಮಲೇಷ್ಯಾದಲ್ಲಿ ಉಜ್ಮಾ ಮತ್ತು ಅಲಿ ಪರಿಚಿತರಾಗಿದ್ದರು. ಪರಿಚರ ಪ್ರೀತಿಗೆ ತಿರುಗಿ ಮೇ 3ರಂದು ಮದುವೆಯಾಗಿದ್ದರು. ಮೇ 1ರಂದು ವಾಗಾ ಗಡಿ ಮೂಲಕ ಉಜ್ಮಾ ಪಾಕಿಸ್ತಾನ ಪ್ರವೇಶಿಸಿದರು.

ಮೇ 12ರಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉಜ್ಮಾ, ತನ್ನ ಮಗಳಿಗೆ ರಕ್ತ ಕಣಗಳಲ್ಲಿನ ತೊಂದರೆ(ಥಲಸೇಮಿಯಾ) ಇರುವುದಾಗಿ ವೈದ್ಯಕೀಯ ದಾಖಲೆಗಳನ್ನು ಪ್ರಸ್ತುತ ಪಡಿಸಿ ತಕ್ಷಣವೇ ಭಾರತಕ್ಕೆ ಮರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.

No Comments

Leave A Comment