Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಪಾಕಿಸ್ತಾನದ ವಾಯುಗಡಿ ಉಲ್ಲಂಘನೆ ಆರೋಪ ನಿರಾಕರಿಸಿದ ಭಾರತೀಯ ಸೇನೆ

ನವದೆಹಲಿ: ಭಾರತೀಯ ವಾಯುಪಡೆ ಪಾಕಿಸ್ತಾನದ ವಾಯುಗಡಿಯನ್ನು ಉಲ್ಲಂಘಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಪ್ರಕಟಿಸಿ ಆರೋಪಿಸಿದ್ದು ಭಾರತೀಯ ಸೇನೆ ಪಾಕಿಸ್ತಾನದ ಆರೋಪವನ್ನು ನಿರಾಕರಿಸಿದೆ.

ಸಿಯಾಚಿನ್ ಗ್ಲೇಸಿಯರ್ ನಲ್ಲಿ ಭಾರತೀಯ ವಾಯುಪಡೆ ವಾಯುಗಡಿಯನ್ನು ಉಲ್ಲಂಘನೆ ಮಾಡಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಪ್ರಕಟಿಸಿವೆ. ” ಪಾಕಿಸ್ತಾನ ವಾಯು ಪಡೆ ಈ ಪ್ರದೇಶದ ಬಳಿ ಸಮರಾಭ್ಯಾಸ ನಡೆಸುತ್ತಿವೆ. ಸಿಒಯಾಚಿನ್ ಕಾಶ್ಮೀರದ ಉತ್ತರ ಭಾಗವಾಗಿದ್ದು, 1984 ರಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

ಪಾಕಿಸ್ತಾನದ ಎಲ್ಲಾ ಸೇನಾ ನೆಲೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭವಾಗಿದ್ದು, ಪಾಕ್ ನ ವಾಯು ಸೇನೆ ಮುಖ್ಯಸ್ಥ ಸೋಹೈಲ್ ಅಮಾನ್ ಸ್ಕಾರ್ಡು ಫಾರ್ವರ್ಡ್ ಬೇಸ್ ಗೆ ಭೇಟಿ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಪ್ರಕಟಿಸಿವೆ.

ಭಾರತೀಯ ಸೇನೆ ಪಾಕಿಸ್ತಾನ ಪ್ರೇರೇಪಿತ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಗಡಿನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸಿ ನೌಶೇರಾ ಸೆಕ್ಟರ್ ನ ಹಲವು ಸೇನಾ ನೆಲೆಗಳಿಗೆ ಹಾನಿಯುಂಟುಮಾಡಿರಿವ ಬೆನ್ನಲ್ಲೇ ಪಾಕಿಸ್ತಾನ ಭಾರತದ ವಿರುದ್ಧ ವಾಯುಗಡಿ ಉಲ್ಲಂಘನೆ ಆರೋಪ ಮಾಡಿದೆ.

No Comments

Leave A Comment