Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ವಿಂಬಲ್ಡನ್‌ ಆಡಲಿರುವ ಅಮ್ಮ ಅಜರೆಂಕಾ!

ಪ್ಯಾರಿಸ್‌: ವಿಶ್ವದ ಮಾಜಿ ನಂಬರ್‌ ವನ್‌ ಆಟಗಾರ್ತಿ, ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ಈ ಬಾರಿಯ ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ಆಡುವು ದಾಗಿ ಹೇಳಿದ್ದಾರೆ.

ಇದರ ಲ್ಲೇನು ವಿಶೇಷ ಎನ್ನುತ್ತೀರಾ? ಅಜರೆಂಕಾ ಗ್ರ್ಯಾನ್‌ಸ್ಲಾಮ್‌ ಆಡ ಲಿಳಿಯುತ್ತಿರುವುದು “ಅಮ್ಮ’ನಾದ ಬಳಿಕ!
27ರ ಹರೆಯದ ವಿಕ್ಟೋರಿಯಾ ಅಜರೆಂಕಾ 7 ತಿಂಗಳ ಹಿಂದೆ ಗಂಡುಮಗು “ಲಿಯೋ’ಗೆ ಜನ್ಮವಿತ್ತಿದ್ದರು. ಅನಂತರ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು. ಈಗ ಅಭ್ಯಾಸ ಆರಂಭಿಸಿ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುವ ಹುಮ್ಮಸ್ಸಿನಲ್ಲಿದ್ದಾರೆ. “ನನ್ನ ತರಬೇತಿ ಜಾರಿಯಲ್ಲಿದೆ. ಟೆನಿಸ್‌ ಸ್ಪರ್ಧೆಗಿಳಿಯಲು ಸಿದ್ಧಳಾಗಿದ್ದೇನೆ. ಜತೆಗೆ ತಾನು ಲಂಡನ್‌ ಮತ್ತು ವಿಂಬಲ್ಡನ್‌ ನೋಡಬೇಕೆಂದು ಮಗ ಲಿಯೋ ಕಿಂಡಾ ಹೇಳುತ್ತಿದ್ದಾನೆ…’ ಎಂದು ಅಜರೆಂಕಾ ತುಸು ತಮಾಷೆಯಾಗಿ ಟ್ವೀಟ್‌ ಮಾಡಿದ್ದಾರೆ.

“ಗ್ರಾಸ್‌ ಕೋರ್ಟ್‌ನಲ್ಲೇ ಅತ್ಯಂತ ಮಹತ್ವದ್ದೆನಿಸಿದ ವಿಂಬಲ್ಡನ್‌ನಲ್ಲಿ ಆಡುವುದು ನನ್ನ ಯೋಜನೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಿಮಗೆ ಬೆಳವಣಿಗೆಗಳನ್ನು ತಿಳಿಸುತ್ತ ಇರುತ್ತೇನೆ…’ ಎಂದಿದ್ದಾರೆ.

No Comments

Leave A Comment