Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ವಿವಾದಾತ್ಮಕ ಟ್ವೀಟ್; ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಟ್ವಿಟರ್ ಖಾತೆ ಅಮಾನತು!

ನವದೆಹಲಿ: ಮಹಿಳೆಯರಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಟ್ವೀಟ್ ಮಾಡಿದ ಹಿನ್ನಲೆಯಲ್ಲಿ ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರ ಟ್ವಿಟರ್ ಖಾತೆಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬಾಲಿವುಡ್ ಖ್ಯಾತ ಗಾಯಕರಲ್ಲಿ ಒಬ್ಬರಾಗಿರುವ  ಅಭಿಜಿತ್ ಭಟ್ಟಾಚಾರ್ಯ ಅವರು ಇತ್ತೀಚೆಗೆ ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕಿ ಶೆಹ್ಲಾ ರಷೀದ್ ಸೇರಿದಂತೆ ಮಹಿಳೆಯರ ವಿರುದ್ದ ಅವಹೇಳನಕಾರಿ ಟ್ವೀಟ್ ಮಾಡಿದ್ದರು.  ಈ ಟ್ವೀಟ್ ಗಳ ವಿರುದ್ಧ ಶೆಹ್ಲಾ ರಷೀದ್ ಅವರು ದೂರು ಕೂಡ ನೀಡಿದ್ದರು. “ಆಕೆ 2 ಗಂಟೆಗೆ ಹಣ ಪಡೆದು ಗ್ರಾಹಕನನ್ನು ಸಂತೃಪ್ತಿ ಗೊಳಿಸಿಲ್ಲ ಎಂಬ ಊಹಾಪೋಹಗಳಿವೆ ಎಂದು ಅಭಿಜಿತ್ ಟ್ವೀಟ್ ಮಾಡಿದ್ದರು.

ಈ ಬಗ್ಗೆ ಶೆಹ್ಲಾ ರಷೀದ್  ಮಾನಹಾನಿ ದೂರು ದಾಖಲಿಸಿದ್ದರು. ಅಲ್ಲದೆ ಶೆಹ್ಲಾ ಅವರಿಗೆ ಬೆಂಬಲಿಸಿ ನೂರಾರು ಟ್ವೀಟ್ ಗಳು ಹರಿದು ಬಂದಿತ್ತು.ಇದಾದ ಬೆನ್ನಲ್ಲೇ ಅಭಿಜಿತ್ ತಮ್ಮ ವಿವಾದಾತ್ಮಕ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದರು. ಇದನ್ನು ಉಲ್ಲೇಖಿಸಿ ಶೆಹ್ಲಾ ಟ್ವೀಟ್ ಮಾಡಿದ್ದರು. ಅಲ್ಲದೆ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದಗಳನ್ನು ಕೂಡ ತಿಳಿಸಿದ್ದರು. ಇದೀಗ  ಅಭಿಜಿತ್ ಅವರ ಟ್ವಿಟರ್ ಖಾತೆಯನ್ನು ಅಮಾನತು ಮಾಡಲಾಗಿದ್ದು, ತಮ್ಮ ಖಾತೆ ಅಮಾನತಿಗೆ ಲೇಖಕಿ ಅರುಂಧತಿ ರಾಯ್ ಮತ್ತು ಜೆಎನ್ ಯು ವಿದ್ಯಾರ್ಥಿ ಸಂಘಟನೆಗಳ ಕೈವಾಡವಿದೆ ಎಂದು ಗಾಯಕ ಅಭಿಜಿತ್  ಆರೋಪಿಸಿದ್ದಾರೆ.

ಇದೀಗ ಅಭಿಜಿತ್ ಪರವಾಗಿಯೂ ಒಂದಷ್ಟು ಟ್ವೀಟಿಗರು ಟ್ವೀಟ್ ಮಾಡುತ್ತಿದ್ದು, ಸ್ಟಾಂಡ್ ವಿತ್ ಅಭಿಜಿತ್ (#IStandWithAbhijeet)ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ಟ್ವೀಟ್ ಮಾಡುತ್ತಿದ್ದಾರೆ.

No Comments

Leave A Comment