Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಚೇತನ್‌ ಈಗ ಅತಿರಥ

ನಿರ್ದೇಶಕ ಮಹೇಶ್‌ ಬಾಬು, “ಆ ದಿನಗಳು’ ಚೇತನ್‌ಗೊಂದು ಸಿನಿಮಾ ಮಾಡುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಚಿತ್ರೀಕರಣ ಮುಗಿದರೂ ಟೈಟಲ್‌ ಮಾತ್ರ ಫಿಕ್ಸ್‌ ಆಗಿರಲಿಲ್ಲ. ಮಹೇಶ್‌ ಬಾಬು ಟೈಟಲ್‌ಗಾಗಿ ಸಾಕಷ್ಟು ತಲೆಕೆರೆದುಕೊಂಡಿದ್ದು ಉಂಟು. ಕೊನೆಗೂ ಅವರಿಗೊಂದು ಟೈಟಲ್‌ ಹೊಳೆದಿದೆ. ಆದರೆ, ಆ ಟೈಟಲ್‌ ಮಾತ್ರ ಬೇರೆಯವರ ಬ್ಯಾನರ್‌ನಲ್ಲಿ ಇತ್ತು.

ಈಗ ತಾನು ಇಷ್ಟಪಟ್ಟ ಟೈಟಲ್‌ ಅನ್ನು ಪಡೆದಿದ್ದಾರೆ ಮಹೇಶ್‌ ಬಾಬು. ಅದು “ಅತಿರಥ’. ಹೌದು, “ಆ ದಿನಗಳು’ ಚೇತನ್‌ ನಟಿಸುತ್ತಿರುವ ಈ ಚಿತ್ರಕ್ಕೆ “ಅತಿರಥ’ ಎಂದು ಟೈಟಲ್‌ ಇಟ್ಟಿದ್ದಾರೆ ಮಹೇಶ್‌ ಬಾಬು. ಕಥೆಗೆ ಈ ಟೈಟಲ್‌ ತುಂಬಾ ಹೊಂದಿಕೆಯಾಗುವುದರಿಂದ ಬೇರೆ ಬ್ಯಾನರ್‌ನಿಂದ ಕೇಳಿಪಡೆದಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ “ಅತಿರಥ’, ಒಂದು ಸ್ಪೆಷಲ್‌ ಸಾಂಗ್‌ ಬಾಕಿ ಇಟ್ಟಿದೆ. ಸಖತ್‌ ಕಲರ್‌ಫ‌ುಲ್‌ ಆಗಿರುವ ಈ ಹಾಡಿನಲ್ಲಿ ನವನಟಿಯೊಬ್ಬಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು, ಈ ಚಿತ್ರದಲ್ಲಿ ಲತಾ ಹೆಗಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಮಾಜಿಕ ವಿಷಯಗಳನ್ನಿಟ್ಟುಕೊಂಡು ಮಹೇಶ್‌ ಈ ಕಥೆ ಹೆಣೆದಿದ್ದಾರೆ.

No Comments

Leave A Comment