Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಕಲಬುರ್ಗಿ ಹೊರವಲಯದಲ್ಲಿ ಕಾರು ಪಲ್ಟಿ: ಇಬ್ಬರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸೇರಿ ಮೂವರು ಸಾವು

ಕಲಬುರ್ಗಿ: ಕಲಬುರಗಿಯ ಹೊರವಲಯದ ಗೀತಾ ನಗರ ಬಳಿ ಕಾರು ಪಲ್ಟಿಯಾಗಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ಮೂವರು ಸಾವಿಗೀಡಾದ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಶರಣಬಸಪ್ಪ(33), ಪ್ರತ್ಯಕ್ಷ (30), ಪ್ರತೀಕ್‌(31) ಮೃತ ದುರ್ದೈವಿಗಳು. ಮೃತರ ಪೈಕಿ ಶರಣಪ್ಪ ಪಾಟೀಲ ಉದ್ಯಮಿ. ಇನ್ನಿಬ್ಬರು ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು.

ರಾತ್ರಿ 11ರ ಸುಮಾರಿಗೆ ಊಟ ಮಾಡಲು ಸೇಡಂ ರಸ್ತೆಯ ಡಾಬಾಕ್ಕೆ ತೆರಳಿದ್ದರು. ಮನೆಗೆ ಹಿಂದಿರುಗಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಮೃತರು ಅಂತಿಮ ವರ್ಷದ ಎಂಜಿನಿಯರಿಂಗ್‌ನಲ್ಲಿ ಓದುತ್ತಿದ್ದರು.

ಇದೇ ಕಾಲೇಜಿನ ಇನ್ನಿಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾವಿದೆ. ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

No Comments

Leave A Comment