Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಮಂಡ್ಯ: ಕ್ರಿಕೆಟ್ ಬೆಟ್ಟಿಂಗ್ ಗೆ 9 ನೇ ತರಗತಿ ಬಾಲಕ ಬಲಿ

ಮಂಡ್ಯ: ಕ್ರಿಕೆಟ್ ಬೆಟ್ಟಿಂಗ್ ಗೆ 9 ನೇ ತರಗತಿ ಬಾಲಕನೋರ್ವ ಬಲಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಕೆಆರ್ ಪೇಟೆ ಪೊಲೀಸರು ಡಿಪ್ಲೊಮಾ ವಿದ್ಯಾರ್ಥಿ ದೀಕ್ಷಿತ್(20) ನ್ನು ಬಂಧಿಸಿದ್ದಾರೆ.

ಬೆಟ್ಟಿಂಗ್ ಗೆ ಅಡಿಕ್ಟ್ ಆಗಿದ್ದ  ಡಿಪ್ಲೊಮಾ ವಿದ್ಯಾರ್ಥಿ ದೀಕ್ಷಿತ್‌(19) ಗೆ ಹಣದ ಅವಶ್ಯಕತೆ ಇದ್ದಿದರಿಂದ ಸ್ನೇಹಿತ ಶಶಾಂಕ್(14) ಬಳಿ ಹಣ ಕೇಳಿದ್ದಾನೆ. ಆದರೆ ಪೋಷಕರ ಅನುಮತಿ ಇಲ್ಲದೇ ಹಣ ನೀಡಲು ನಿರಾಕರಿಸಿದ್ದರಿಂದ ಆತನನ್ನು ಮನೆಯಿಂದ ಹೊರ ಕರೆದೊಯ್ದು ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿ ಹತ್ಯೆ ಮಾಡಿದ್ದ ಬಳಿಕ ಬಾಲಕನ ಬಳಿ ಇದ್ದ ಕೀಲಿಕೈ, ಮೊಬೈಲ್ ನ್ನು ಕಿತ್ತುಕೊಂಡು ಶಶಾಂಕ್ ನ ಮನೆಯಲ್ಲಿ ಬೆಳ್ಳಿಯ ವಿಗ್ರಹ ಹಾಗೂ ಬಳೆಗಳನ್ನು ಕದ್ದಿದ್ದ. ಅಷ್ಟೇ ಅಲ್ಲದೇ ಶಶಾಂಕ್ ಬಳಿ ಕಸಿದುಕೊಂಡಿದ್ದ ಮೊಬೈಲ್ ನ್ನು ಸಹ ಮಾರಾಟ ಮಾಡಿದ್ದ.

ಮಾರಾಟವಾಗಿದ್ದ ಮೊಬೈಲ್ ಫೋನ್ ನೀಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

No Comments

Leave A Comment