Log In
BREAKING NEWS >
BJP ಅಂತಿಮ ಪಟ್ಟಿ ಪ್ರಕಟ, 4 ಕ್ಷೇತ್ರ ನಿಗೂಢ; ಶೋಭಾಗೂ ಟಿಕೆಟ್ ಇಲ್ಲ....ನೋಯ್ಡಾ : ಮಹಾ ಪಾತಕಿ ಬಾಲರಾಜ್‌ ಭಾಟಿ ಎನ್‌ಕೌಂಟರ್‌ಗೆ ಬಲಿ...

ಬಿಜೆಪಿಯತ್ತ ಒಲವು ತೋರಿಸುತ್ತಿರುವ ರಜನಿಕಾಂತ್, ಶೀಘ್ರದಲ್ಲೇ ಮೋದಿ ಭೇಟಿ?

ಚೆನ್ನೈ: ರಾಜಕೀಯ ಪ್ರವೇಶಿಸುವುದಾಗಿ ಸುಳಿವು ನೀಡಿದ್ದ ಸೂಪರ್‍‍ಸ್ಟಾರ್ ರಜನಿಕಾಂತ್ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ಹೇಳಿವೆ.

ಬಿಜೆಪಿ ಪಕ್ಷದ ವರಿಷ್ಠರು ರಜನಿಕಾಂತ್ ಅವರನ್ನು ಶನಿವಾರ ಭೇಟಿಯಾಗಿದ್ದು, ರಜನಿ ಅವರು ಈ ವಾರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ರಜನಿಕಾಂತ್ ಅವರ ಆಪ್ತಮೂಲಗಳು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ರಜನಿಕಾಂತ್ ಅವರ ಹೊಸ ಸಂಘಟನೆಯನ್ನು ಆರಂಭಿಸಲು ಮುಂದಾಗಿದ್ದು, ಈ ವಿಷಯದ ಬಗ್ಗೆ ತಲೈವಾ ಅವರು ಮೋದಿ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಆದಾಗ್ಯೂ, ಈ ಬಗ್ಗೆ ನಮಗೇನೂ ತಿಳಿದಿಲ್ಲ ಎಂದು ತಮಿಳುನಾಡು ರಾಜ್ಯ ಬಿಜೆಪಿ ಹೇಳಿದೆ.

ಮುಂದಿನ ದಿನಗಳ್ಲಿ ಬಿಜೆಪಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡರೂ ತಮಿಳುನಾಡಿನ ಆಡಳಿತಾರೂಡ ಪಕ್ಷವಾದ ಎಐಎಡಿಎಂಕೆ ಹೊಂದಿಕೊಂಡು ಹೋಗುವಂತಿರಬೇಕು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ  ಒ.ಪನ್ನೀರ್ ಸೆಲ್ವಂ ಅವರು ರಾಜ್ಯಭಾರ ಮಾಡುವಲ್ಲಿ ವಿಫಲರಾಗಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಇಡಪ್ಪಡಿ.ಕೆ.ಪಳನಿಸ್ವಾಮಿ ಅವರು ಉತ್ತಮ ಯೋಚನೆಗಳನ್ನು ಹೊಂದಿದ್ದಾರೆ. ನಾವು ಎಐಎಡಿಎಂಕೆಯನ್ನು ಇನ್ನಷ್ಟು ಸದೃಢಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

No Comments

Leave A Comment