Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ: ಕೊಚ್ಚಿ ಹೋದ ವ್ಯಕ್ತಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶನಿವಾರ ಸುರಿದ ಭಾರಿ ಮಳೆ ಅನಾಹುತವನ್ನೇ ಸೃಷ್ಟಿಸಿದೆ. ಕುರುಬರಹಳ್ಳಿಯ ಜೆ.ಸಿ.ನಗರದಲ್ಲಿ ನಡೆದಿದೆ.ಇನ್ನೂ 2 ದಿನ ಗುಡುಗು ಮಿಂಚು , ಗಾಳಿ ಸಹಿತ  ಭಾರೀ ಮಳೆಯಾಗುವ ಕುರಿತು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಕೊಚ್ಚಿ ಹೋದ ಯುವಕ

ಮಳೆಯಿಂದ ತುಂಬಿ ಹರಿಯುತ್ತಿದ್ದ ರಾಜಕಾಲುವೆಯಲ್ಲಿ 24 ವರ್ಷದ ಯುವಕ ಕೊಚ್ಚಿ ಹೋದ ಘಟನೆ ರಾಜಕುಮಾರ್‌ ರಾಜ ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ರಾಜಕುಮಾರ್‌ ಜೆ.ಸಿ. ನಗರದ ರಾಜಕಾಲುವೆಯ ಪಕ್ಕದಲ್ಲೇ ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾಲುವೆಯಲ್ಲಿ ಮಳೆ ನೀರು ವೇಗವಾಗಿ ಹರಿಯುತ್ತಿತ್ತು. ಆಗ ಪಕ್ಕದಲ್ಲಿ ನಿರ್ಮಿಸುತ್ತಿದ್ದ ಗೋಡೆ ಕುಸಿದು ಜೆಸಿಬಿ ಮೇಲೆ ಬಿದ್ದಿದೆ. ಜೆಸಿಬಿಯಲ್ಲಿ ಕೆಲಸಮಾಡುತ್ತಿದ್ದ ಯುವಕ ಆಯತಪ್ಪಿ ರಾಜಕಾಲುವೆ ಯಲ್ಲಿ ಬಿದ್ದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಮೇಯರ್‌ ಪದ್ಮಾವತಿ, ಮಹಾಲಕ್ಷ್ಮೀ  ಲೇಔಟ್‌ನ ಕಾರ್ಪೋರೇಟರ್‌ ಕೇಶವಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .ಕಳೆದ 13 ಗಂಟೆಗಳಿಂದ ಹುಡುಕಾಟ ನಡೆಸಲಾಗುತ್ತಿದ್ದು ಇನ್ನೂ ಪತ್ತೆಯಾಗಿಲ್ಲ.

ಭಾರಿ ಮಳೆಯ ಪರಿಣಾಮ ನಗರದಲ್ಲಿ ಬಹುತೇಕ ಕಡೆ ವಿದ್ಯುತ್‌ ಕಡಿತಗೊಂಡು ಕತ್ತಲು ಆವರಿಸಿದೆ. ಹಲವೆಡೆ ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಟ್ರಾನ್ಸ್‌ ಫಾರ್ಮರ್‌ಗಳು ಹಾನಿಗೀಡಾಗಿವೆ.

220 ಕೆ.ವ್ಯಾಟ್‌ ಸಾಮರ್ಥಯದ ಸೋಮನಹಳ್ಳಿ ಮತ್ತು ಸುಬ್ರಹ್ಮಣ್ಯಪುರದಲ್ಲಿರು ಟ್ರಾನ್ಸ್‌ಫಾರ್ಮರ್‌ ಗಳು ಹಾನಿಗೀಡಾಗಿವೆ. ಇದರಿಂದ 66/ 11 ಕೆ.ವ್ಯಾಟ್‌ ಸಾಮರ್ಥಯದ ಎನ್‌ಜಿಎಫ್ ಮತ್ತು ಸಾರಕ್ಕಿ ವಿದ್ಯುತ್‌ ಕೇಂದ್ರಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಪರಿಣಾಮ ಹಲಸೂರು, ಹೆಬ್ಟಾಳ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಬಾಣಸವಾಡಿ, ಜಯನಗರ 4ನೇ, 8ನೇ ಹಂತ ಸುತ್ತಮುತ್ತಲ ಪ್ರದೇಶಗಳಲ್ಲಿ ಕತ್ತಲು ಆವರಿಸಿದೆ. ಎಫ್.6, 18, 19, 10 2 ಮತ್ತು 17 ಹಾಳಾದ ಬಗ್ಗೆ ವರದಿಯಾಗಿದೆ.

ಅಲ್ಲದೇ ನಾಗವಾರ ಜಂಕ್ಷನ್‌ ಸೇರಿದಂತೆ ಪ್ರಮುಖ ಜಂಕ್ಷನ್‌ಗಳು ಮತ್ತು ರಸ್ತೆಗಳಲ್ಲಿ ವಾಹನಗಳು ನೀರಿನಲ್ಲಿ ಮುಳುಗಿವೆ. ಅಪಾರ್ಟ್‌ಮೆಂಟ್‌ಗಳಲ್ಲಿ ನಿಲ್ಲಿಸಿದ ವಾಹನಗಳು ಜಲಾವೃತ್ತವಾಗಿವೆ. ಅಂಡರ್‌ ಪಾಸ್‌ಗಳು ನೀರಿನಲ್ಲಿ ಮುಳುಗಿ ವಾಹನ ಸವಾರರು ಪರಾಡಬೇಕಾಯಿತು.

ಮಳೆಯಿಂದಾಗಿ ಹೆಚ್ಚಿನ ಹಾನಿ ಸಂಭವಿಸಿರುವ ನಗರದ ರಾಜ್‌ಕುಮಾರ್‌ ರಸ್ತೆ, ಜೆ.ಸಿ.ನಗರ, ಕುರುಬರಹಳ್ಳಿ, ದತ್ತಾತ್ರೇಯ ಕಾಲೋನಿಗಳಿಗೆ ಮೇಯರ್‌ ಜಿ. ಪದ್ಮಾವತಿ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್‌, ಉಪ ಮೇಯರ್‌ ಮತ್ತು ಆಯುಕ್ತರು ಬಿಬಿಎಂಪಿಯ ಸಹಾವಾಣಿ ಕೇಂದ್ರದಲ್ಲಿ ಕುಳಿತು ನಾಗರಿಕರ ದೂರು ಆಲಿಸಿದರು.

ಶನಿವಾರ ರಾತ್ರಿ 7ರ ನಂತರ ಆರಂಭವಾದ ಭಾರೀ ಗಾಳಿ ಮತ್ತು ಗುಡುಗು ಸಹಿತ ಮಳೆ ಹೊಡೆತಕ್ಕೆ ಹತ್ತಕ್ಕೂ ಹೆಚ್ಚು ಕಡೆ ಮರಗಳು ನೆಲಕಚ್ಚಿದವು. ವಿಜಯನಗರದ ಚಂದ್ರಲೇಔಟ್‌ ಮತ್ತು ಮಠದಹಳ್ಳಿ-ಆರ್‌.ಟಿ. ನಗರ ಮುಖ್ಯರಸ್ತೆಯಲ್ಲಿ ವಿದ್ಯುತ್‌ ಕಂಬ ಬಿದ್ದಿದ್ದು, ಈ ಮಾರ್ಗಗಳಲ್ಲಿ ಸಂಚಾರದಟ್ಟಣೆ ಉಂಟಾಯಿತು. ಪರಿಣಾಮ ಗಂಟೆಗಟ್ಟಲೆ ವಾಹನಸವಾರರು ಪರದಾಡಿದರು.

ಲಗ್ಗೆರೆ ಕೆಂಪೇಗೌಡ ಲೇಔಟ್‌, ನಂದಿನಿ ಲೇಔಟ್‌ನಲ್ಲಿ ಬೆಂಗಳೂರು ಪಬ್ಲಿಕ್‌ ಶಾಲೆ ರಸ್ತೆಯ ಒಂದೆರಡು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಲಗ್ಗೆರೆಯಲ್ಲಿ ಚರಂಡಿ ನೀರು ಸರಾಗವಾಗಿ ಹರಿಯದ್ದರಿಂದ ಗುರುನಾಥ್‌ ಎಂಬುವರ ಮನೆಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.

ಅಂಡರ್‌ಪಾಸ್‌, ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ಆವರಿಸಿಕೊಂಡಿದ್ದರಿಂದ ವಾಹನಗಳ ಸಂಚಾರ ಆಮೆಗತಿಯಲ್ಲಿ ಸಾಗಿತ್ತು. ಮಠದಹಳ್ಳಿ-ಆರ್‌.ಟಿ. ನಗರದಲ್ಲಿ ಸುಮಾರು 30 ನಿಮಿಷ ಟ್ರಾμಕ್‌ ಸಂಪೂರ್ಣ ಸ್ತಬ್ಧವಾಗಿತ್ತು. ಡಬಲ್‌ ರಸ್ತೆ, ಕೆ.ಜಿ. ರಸ್ತೆ, ಆನಂದರಾವ್‌ ವೃತ್ತ, ಓಕಳಿಪುರ, ಕೆ.ಆರ್‌. ಮಾರುಕಟ್ಟೆ ಮಾರ್ಗಗಳಲ್ಲಿ ಒಂದಿಂಚು ಮುಂದೆ ಸಾಗಲು ವಾಹನ ಸವಾರರು ಪರದಾಡಿದರು.

ಬಿಎಂಟಿಸಿ ಬಸ್‌ಗಳು ನಿಗದಿತ ಸಮಯಕ್ಕೆ ಬರದಿ ದ್ದರಿಂದ ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾದುನಿಂತರು. ಕೆಲವೆಡೆ ನಾಗಕರಿಕರು ಅನಿವಾರ್ಯವಾಗಿ ಆಟೋ ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಮೊರೆಹೋದರು. ಮತ್ತೂಂದೆಡೆ ಮೆಜೆಸ್ಟಿಕ್‌ಗೆ ಬರುವ  ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಮಳೆಯಿಂದ ತಡವಾಗಿ ಆಗಮಿಸಿದವು. ದೂರದ ಊರುಗಳಿಗೆ ತೆರಳುವವರಿಗೆ ಇದರಿಂದ ಸಮಸ್ಯೆಯಾಯಿತು.

ಆರ್‌.ಟಿ. ನಗರ ಫ‌ುಡ್‌ವರ್ಲ್ಡ್, ರಾಜಕುಮಾರ್‌ರಸ್ತೆಯ 12ನೇ ಮುಖ್ಯರಸ್ತೆ, ಮಲ್ಲೇಶ್ವರ 18ನೇ ಕ್ರಾಸ್‌, ಬಳ್ಳಾರಿ ರಸ್ತೆಯ ಕಾವೇರಿ ಜಂಕ್ಷನ್‌, ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಬಳಿ, ಬೆನ್ಸನ್‌ ಟೌನ್‌, ಕತ್ರಿಗುಪ್ಪೆ ಮುಖ್ಯರಸ್ತೆ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಬ್ರಿಡ್ಜ್, ವಿಜಯನಗರದಲ್ಲಿ ಮರಗಳು ಬಿದ್ದಿವೆ. ಡಬಲ್‌ ರಸ್ತೆಯಲ್ಲಿ ನಿಂತ ಕಾರಿನ ಮೇಲೆ ಮರದ ರೆಂಬೆ ಬಿದ್ದಿತು. ಮಧ್ಯರಾತ್ರಿಯಾದರೂ ಮಳೆ ಮುಂದುವರಿದಿತ್ತು. ದೂರುಗಳನ್ನು ಆಧರಿಸಿ ಬಿಬಿಎಂಪಿ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು.

ಬೆಸ್ಕಾಂ ಸಹಾಯವಾಣಿಗೆ ಬಂದ ದೂರುಗಳು
2,329 ಬಂದ ದೂರುಗಳು

1,233 ದಾಖಲಾದ ದೂರುಗಳು

ಮಳೆಗಾಲಕ್ಕೆ ಸಿದ್ಧತೆಯಾಗಿದೆ 
ಮಳೆಗಾಲದ ಹಿನ್ನೆಲೆಯಲ್ಲಿ ಪಾಲಿಕೆಯ 61 ಉಪವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪನೆ ಮಾಡುವಂತೆ ಆದೇಶ ಹೊರಡಿಸ ಲಾಗಿದೆ. ಜತೆಗೆ ಪ್ರತಿ ಕಂಟ್ರೋಲ್‌ ರೂಂ ಬಳಿ ಒಂದು ವಾಹನ ಹಾಗೂ ಸಿಬ್ಬಂದಿ ಮತ್ತು ಉಪಕರಣಗಳು ಇರಲಿದ್ದು, ಮುಂದಿನ ಮೂರು ತಿಂಗಳುಗಳ ಕಾಲ ಈ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸಲಿವೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. ಈ ಹಿಂದೆ ಪಾಲಿಕೆಯಲ್ಲಿ 299 ಅಪಾಯಕಾರಿ ಸ್ಥಳಗಳನ್ನು ಗುರುತಿಸ ಲಾಗಿತ್ತು. ಆ ಪೈಕಿ 46 ಸ್ಥಳಗಳನ್ನು ಹೊರತು ಪಡಿಸಿ ಉಳಿದೆಲ್ಲ ಭಾಗಗಳಲ್ಲಿ ಕಾಮಗಾರಿಪೂರ್ಣಗೊಳಿಸಲಾಗಿದ್ದು, ಉಳಿದ ಕಡೆಗಳಲ್ಲಿ ದೀರ್ಘ‌ ಕಾಲಿಕ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ತಡವಾಗಿದೆ. ಅಂತಹ ಸ್ಥಳಗಳಲ್ಲಿಯೂ ಸಹ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

No Comments

Leave A Comment