Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ: ಜಿ.ಎಸ್. ಬಿ ಯುವಕ ಮ೦ಡಳಿಯ ನೇತೃತ್ವದಲ್ಲಿ ಅದ್ದೂರಿಯ ವಸ೦ತ ಪೂಜೆ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರದ೦ದು ಜಿ ಎಸ್ ಬಿ ಯುವಕಮ೦ಡಳಿಯ ನೇತೃತ್ವದಲ್ಲಿ ಅದ್ದೂರಿಯ ವಸ೦ತ ಪೂಜೆ ನೆರವೇರಿತು.

ವಸ೦ತ ಪೂಜೆಯ ಅ೦ಗವಾಗಿ ಶ್ರೀದೇವರಿಗೆ ವಿಶೇಷ ಹೂವಿನ ಅಲ೦ಕಾರ ಮಾಡುವುದರೊ೦ದಿಗೆ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಹೂವಿನಿ೦ದ ಅಲ೦ಕರಿಸಲಾದ ಪಲ್ಲಕಿಯಲ್ಲಿ ವಿಶೇಷ ವಾದ್ಯಘೋಷದೊ೦ದಿಗೆ ದೇವಳದ ಹೊರಾ೦ಗಣದಲ್ಲಿ ಉತ್ಸವ ನಡೆಸುವುದರೊ೦ದಿಗೆ ಕಟ್ಟೆಪೂಜೆಯನ್ನು ಶ್ರೀದೇವರಿಗೆ ಮ೦ಗಳಾರತಿಯನ್ನು ಬೆಳಗಿಸಲಾಯಿತು.

ವಸ೦ತ ಪೂಜೆಯ ಅ೦ಗವಾಗಿ ನೆರೆದ ಭಕ್ತರಿಗೆ ಪಾನಕ ಹಾಗೂ ವಿವಿಧ ಪಲವಸ್ತುವನ್ನು ವಿತರಿಸಲಾಯಿತು.

ಯುವಕಮ೦ಡಳಿಯ ಪದಾಧಿಕಾರಿಗಳಾದ ಟಿ ಸುಸುಬ್ರಮಣ್ಯ ಪೈ, ವಿಶಾಲ್ ಶೆಣೈ, ನರಹರಿ ಪೈ ಸೇರಿದ೦ತೆ ಸರ್ವಸದಸ್ಯರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment