Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಕಾದ ಕುಲುಮೆಯಂತಾದ ನೆಲ- ಬಿಸಿಗಾಳಿ: 100ಕ್ಕೂ ಹೆಚ್ಚು ಸಾವು

ಹೈದರಾಬಾದ್‌: ತೀವ್ರ ಬಿಸಿಲಿನ ತಾಪಕ್ಕೆ ಆಂಧ್ರಪ್ರದೇಶ ಮತ್ತು  ತೆಲಂಗಾಣ ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ 87 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ. ಈ ಪೈಕಿ ಪ್ರಕಾಶಂ ಜಿಲ್ಲೆಯಲ್ಲಿ 15, ಗುಂಟೂರಿನಲ್ಲಿ 15, ನೆಲ್ಲೂರಿನಲ್ಲಿ 13, ಪೂರ್ವ ಗೋದಾವರಿಯಲ್ಲಿ 10, ಪಶ್ಚಿಮ ಗೋದಾವರಿಯಲ್ಲಿ 9,ಚಿತ್ತೂರಿನಲ್ಲಿ 8, ಕೃಷ್ಣಾದಲ್ಲಿ 5, ವಿಶಾಖಪಟ್ಟಣದಲ್ಲಿ 4, ಶ್ರೀಕಾಕುಳಂನಲ್ಲಿ 4 ಮತ್ತು  ವಿಜಯನಗರದಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ.

ಆದರೆ, ಇವರೆಲ್ಲರೂ ಬಿಸಿಗಾಳಿಗೆ ಮೃತಪಟ್ಟಿದ್ದಾರೆ ಎನ್ನುವುದನ್ನು ರಾಜ್ಯ ವಿಪತ್ತು ನಿರ್ವಹಣೆ ಇಲಾಖೆ ದೃಢಪಡಿಸಿಲ್ಲ. ತೆಲಂಗಾಣದಲ್ಲೂ ಕಳೆದ 48 ಗಂಟೆಗಳಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ.

ಕಮ್ಮಮ್‌ ಜಿಲ್ಲೆಯಲ್ಲಿ ಇಬ್ಬರು ಕೃಷಿ ಕಾರ್ಮಿಕರು ಬಿಸಿಗಾಳಿಗೆ ಮೃತಪಟ್ಟಿದ್ದಾರೆ. ಸೂರ್ಯಪೇಟೆ ಜಿಲ್ಲೆಯಲ್ಲಿ ಗುರುವಾರ ಕೃಷಿ ಇಲಾಖೆಯ ಯುವ ಅಧಿಕಾರಿಯೊಬ್ಬರು ಬಿಸಿಲಿನ ತಾಪಕ್ಕೆ ಸಾವಿಗೀಡಾಗಿದ್ದಾರೆ.

ಮೆಡಕ್‌ ಜಿಲ್ಲೆಯಲ್ಲಿ ಬಿಸಿಗಾಳಿಯಿಂದ ಅಸ್ವಸ್ಥರಾದ 87 ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಬಿಸಿಲಿನ ಝಳಕ್ಕೆ ಜನಜೀವನ ತತ್ತರಿಸಿತು. ಎರಡು ರಾಜ್ಯಗಳು ಕಾದ ಕುಲುಮೆಯಂತಾಗಿದ್ದವು.

No Comments

Leave A Comment