Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಸಿಂಧನೂರಿನಲ್ಲಿ ಭೀಕರ ಅಪಘಾತ:ಮಕ್ಕಳು ಸೇರಿ ಒಂದೇ ಕುಟುಂಬದ 5 ಬಲಿ

ಸಿಂಧನೂರು: ಇಲ್ಲಿನ ಬೂದಿಹಾಳ ಕ್ಯಾಂಪ್‌ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಲಾರಿಯನ್ನು ಓವರ್‌ಟೇಕ್‌ ಮಾಡುವ ವೇಳೆ ಕಾರು ಢಿಕ್ಕಿಯಾಗಿ ಅದರಲ್ಲಿದ್ದ ಕೊಪ್ಪಳದ ಗಂಗಾವತಿ ಮೂಲದ ಹುಸೇನ್‌ ಪಾಷಾ(35), ಪತ್ನಿ ಮಲಾನಾ(30) ಮಕ್ಕಳಾದ ಸಾಬಿರಾ(14)ಅಲ್ಫಿಯಾ(8)ಗುಲಾಬಿ (5)ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ 8 ವರ್ಷದ ಸಾಫಿಯಾ ಬದುಕುಳಿದಿದ್ದು ಚಿಂತಾಜನಕ ಸ್ಥಿತಿಯಲ್ಲಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಂಧನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

No Comments

Leave A Comment