Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ವಿದ್ಯಾಪೋಷಕ್ ಅಗತ್ಯವುಳ್ಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ವಿಧಾನ ಅನುಕರಣೀಯ- ಅದಮಾರು ಶ್ರೀಪಾದರು

ಉಡುಪಿಯ ಯಕ್ಷಗಾನ ಕಲಾರಂಗ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ವಿಧಾನ ಅತ್ಯಂತ ಕ್ರಮಬದ್ಧ. ವಿದ್ಯಾರ್ಥಿಗಳ ಮನೆಭೇಟಿ ಮಾಡಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡುವುದಲ್ಲದೇ ಅಗತ್ಯ ಇರುವವರಿಗೆ ಮನೆ ಕಟ್ಟಿಸಿಕೊಡುವಂತಹ ಯೋಜನೆ ಶ್ಲಾಘನೀಯ. ಜನಸೇವೆಯೇ ಜನಾರ್ದನ ಸೇವೆ ಎಂಬ ಗಾದೆಯನ್ನು ಅಕ್ಷರಾರ್ಥದಲ್ಲಿ ಅನುಷ್ಠಾನಕ್ಕೆ ತಂದ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲೆಂದು ಆಶೀರ್ವದಿಸಿದರು.

ಅವರು 17-05-2017 ರಂದು ಎಲ್ಲೂರಿನಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಪೂರ್ಣಿಮಾಳಿಗೆ ಸುಮಾರು 2ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಸ್ಥೆ ನವೀಕರಿಸಿಕೊಟ್ಟ ಮನೆಯನ್ನು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.

ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯಲ್ಲಿ ಸಂಸ್ಥೆಯ ಯೋಜನೆಗಳನ್ನು ತಿಳಿಸಿದರು. ಮನೆ ನಿರ್ಮಾಣದ ಮೇಲುಸ್ತುವಾರಿ ನಡೆಸಿದ ಸಂಸ್ಥೆಯ ಉಪಾಧ್ಯಕ್ಷ ಎಂ. ಗಂಗಾಧರ್ ರಾವ್ ಸ್ಯಾಮೀಜಿಯವರಿಗೆ ಫಲಸಮರ್ಪಣೆ ಮಾಡಿದರು. ಹೋಟೇಲ್ ಕಿದಿಯೂರು ಪ್ರೈ.ಲಿ. ಮಾಲಿಕರಾದ ಭುವನೇಂದ್ರ ಕಿದಿಯೂರು ಅವರು ರೂಪಾಯಿ 10000/- ನ್ನು ಪೂರ್ಣಿಮಾಳ ವಿದ್ಯಾರ್ಜನೆಗೆ ನೆರವಾಗಿ ನೀಡಿದರು.

ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಸಂತಿ ಮಧ್ವರಾಜ್, ಪ್ರೊ. ಹೆರಂಜೆ ಕೃಷ್ಣ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮನೆ ನಿರ್ಮಾಣದ ಪ್ರಾಯೋಜಕತ್ವ ವಹಿಸಿದ ಶ್ರೀ ಗುರು ಅಮೀನ್ ಮತ್ತು ಶ್ರೀಮತಿ ಜಯಲಕ್ಷ್ಮೀ ಜಿ. ಅಮೀನ್‍ರಿಗೆ ಸ್ವಾಮೀಜಿ ಅವರು ಶಾಲು, ಸ್ಮರಣಿಕೆಯೊಂದಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಮನೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲೂರು ಗಣೇಶ್ ರಾವ್, ವಿದ್ಯುತ್ ಸಂಪರ್ಕ ಕಲ್ಪಿಸಿದ ನಾಗರಾಜ್ ರಾವ್ ಪಾಂಗಾಳ ಅವರನ್ನು ಗೌರವಿಸಲಾಯಿತು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.

No Comments

Leave A Comment