Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿಶ್ವಾಸ್‌ ಅಮೀನ್‌

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್‌ನಸಮಿತಿಗೆ ಗುರುವಾರ ನಡೆದ ಆಂತರಿಕ ಚುನಾವಣೆಯಲ್ಲಿ 1,073 ಮತಗಳನ್ನು ಪಡೆದು ಜಿಲ್ಲಾ ಅಧ್ಯಕ್ಷರಾಗಿ ಕಾಪು ಕ್ಷೇತ್ರದ ವಿಶ್ವಾಸ್‌ ವಿ. ಅಮೀನ್‌ ಆಯ್ಕೆಯಾದರು. 11 ಮಂದಿ ಸ್ಪರ್ಧಾಳುಗಳಿದ್ದು 7 ಮಂದಿ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ತಿಳಿಸಿದೆ.

ಭಾರತೀಯ ಯುವ ಕಾಂಗ್ರೆಸ್‌ನಿಂದ ಜಿಲ್ಲಾ ಚುನಾವಣಾಧಿಕಾರಿಯಾಗಿ ಸೂರಜ್‌, ವಿಧಾನಸಭಾ ಚುನಾವಣಾಧಿಕಾರಿಯಾಗಿ ಮನೀಶ್‌ ಕಾರ್ಯನಿರ್ವಹಿಸಿದರು.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷರ ವಿವರ ಇಂತಿದೆ:

ಉಡುಪಿ ಕ್ಷೇತ್ರ- ಪ್ರಶಾಂತ್‌ ಪೂಜಾರಿ, ಕಾಪು -ಮೆಲ್ವಿನ್‌ ಡಿ’ಸೋಜಾ, ಉಪಾಧ್ಯಕ್ಷ ಸಂತೋಷ್‌ ಬಂಗೇರಾ, ಕಾರ್ಕಳ – ದೀಪಕ್‌ ಕೋಟ್ಯಾನ್‌, ಕುಂದಾಪುರ – ಇಚ್ಚಿತಾರ್ಥ ಶೆಟ್ಟಿ, ಉಪಾಧ್ಯಕ್ಷ ರವಿ, ಬೈಂದೂರು -ಶೇಖರ್‌ ಪೂಜಾರಿ.

 

No Comments

Leave A Comment