Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಸಿಬಿಐ ನ್ಯಾಯಾಲಯ ತೀರ್ಪು: ಕಲ್ಲಿದ್ದಲು ಗಣಿ ನಿಕ್ಷೇಪ ಹಂಚಿಕೆ ಹಗರಣ: ಮಾಜಿ ಕಾರ್ಯದರ್ಶಿ ಗುಪ್ತಾ ಸೇರಿ ನಾಲ್ವರು ತಪ್ಪಿತಸ್ಥರು

ನವದೆಹಲಿ: ಕಲ್ಲಿದ್ದಲು ಗಣಿ ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್‌.ಸಿ. ಗುಪ್ತಾ ಅವರನ್ನು ತಪ್ಪಿಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಹಗರಣ ನಡೆದಿದೆ ಎನ್ನಲಾದ ಅವಧಿಯಲ್ಲಿ ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿದ್ದ ಕೆ.ಎಸ್‌. ಕ್ರೊಫಾ, ನಿರ್ದೇಶಕರಾಗಿದ್ದ ಕೆ.ಸಿ. ಸಮರಿಯಾ ಮತ್ತು ಕೆಎಸ್‌ಎಸ್‌ಪಿಎಲ್ ಕಂಪೆನಿಯ ಎಂಡಿ ಪವನ್‌ಕುಮಾರ್ ಅಹ್ಲುವಾಲಿಯಾ ಅವರನ್ನೂ ತಪ್ಪಿಸ್ಥರು ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಭಾರತ್ ಪರಾಷರ ಅವರು ಘೋಷಿಸಿದರು.

ಮಧ್ಯಪ್ರದೇಶದ ಥೆಸ್‌ಗೊರಾ–ಬಿ ಮತ್ತು ರುದ್ರಪುರಿ ಕಲ್ಲಿದ್ದಲು ಗಣಿಯನ್ನು ಕೆಎಸ್‌ಎಸ್‌ಪಿಎಲ್ ಕಂಪೆನಿಗೆ ಹಂಚಿಕೆ ಮಾಡಿದ ಪ್ರಕರಣ ಇದಾಗಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮೇ 22ರಂದು ಪ್ರಕಟಿಸಲಿದೆ.

ಪ್ರಕರಣಕ್ಕೆ ಸಂಬಂಧಿಸಿ, ಚಾರ್ಟಡ್ ಅಕೌಂಟೆಂಟ್ ಅಮಿತ್ ಗೋಯೆಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.‌

No Comments

Leave A Comment