Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಕೇಂದ್ರ ಪರಿಸರ ಖಾತೆ ಸಚಿವ ದವೆ ನಿಧನ; ಪ್ರಧಾನಿ ಮೋದಿಗೆ “ಶಾಕ್’

ನವದೆಹಲಿ: ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅನಿಲ್ ಮಹದೇವ ದವೆ(61ವರ್ಷ) ಅವರು ಗುರುವಾರ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ದವೆ ಅವರ ಆಕಸ್ಮಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಘಾತವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ನನ್ನ ಗೆಳೆಯ, ತುಂಬಾ ಗೌರವಾನ್ವಿತ ಸಹೋದ್ಯೋಗಿ ಪರಿಸರ ಖಾತೆ ಸಚಿವ ದವೆಜೀ ಅವರು ದಿಢೀರನೆ ಸಾವನ್ನಪ್ಪಿರುವುದು ನನಗೆ ನಿಜಕ್ಕೂ ಆಘಾತ ಹಾಗೂ ವೈಯಕ್ತಿಕವಾಗಿ ತುಂಬಲಾರದ ನಷ್ಟ ತಂದಿದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ಉಜ್ಜೈನ್ ನ ಬಂದ್ ನಗರದಲ್ಲಿ 1956ರ ಜುಲೈ6ರಂದು ಜನಿಸಿರುವ ದವೆ ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಎಂಕಾಂ ಪದವೀಧರರಾಗಿದ್ದರು.2016ರಲ್ಲಿ ಕೇಂದ್ರ ಸಚಿವ ಸಂಪುಟ ಸೇರಿದ್ದರು.

No Comments

Leave A Comment