Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಚಾರ್ಮಾಡಿ: ಪ್ರಪಾತಕ್ಕೆ ಬಿದ್ದ ಬಸ್‌; 2 ಸಾವು,ಹಲವರಿಗೆ ಗಾಯ

ಬೆಳ್ತಂಗಡಿ : ಇಲ್ಲಿನ ಚಾರ್ಮಾಡಿ ಘಾಟ್‌ನ 3 ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ  ಖಾಸಗಿ ಬಸ್ಸೊಂದು ಪ್ರಪಾತಕ್ಕೆ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಅವಘಡದಲ್ಲಿ
ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಹಲವು ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಪ್ರಾಥಮಿಕ ವರದಿಯಂತೆ ಸ್ಥಳೀಯರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಪ್ರಪಾತಕ್ಕೆ ಬಿದ್ದ ಬಸ್‌ ಕೇರಳ ಮೂಲದ ಪ್ರವಾಸಿಗರದ್ದು ಎಂದು ಹೇಳಲಾಗಿದೆ.

ಬೆಳ್ತಂಗಡಿ ಠಾಣಾ ಪೊಲೀಸರು ದೌಡಾಯಿಸಿದ್ದು,10ಕ್ಕೂ ಹೆಚ್ಚು ಅಂಬುಲೆನ್ಸ್‌ಗಳು ಸ್ಥಳಕ್ಕೆ ಬಂದಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

 

No Comments

Leave A Comment