Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

7.5 ಕೋಟಿ ರೂ ಬ್ಯಾಂಕ್‌ ಹಣದೊಂದಿಗೆ ಪರಾರಿಯಾದ ಮೂವರ ಸೆರೆ

ಮಂಗಳೂರು: ಯೆಯ್ಯಾಡಿಯಲ್ಲಿರುವ ಆ್ಯಕ್ಸಿಸ್‌ ಬ್ಯಾಂಕಿನ ಕರೆನ್ಸಿ ಚೆಸ್ಟ್‌ನಿಂದ ಬೆಂಗಳೂರಿನಲ್ಲಿರುವ ಬ್ಯಾಂಕಿನ ಕೋರಮಂಗಲ ಶಾಖೆಗೆ ಸಾಗಿಸುತ್ತಿದ್ದ 7.5 ಕೋಟಿ ರೂ. ನಗದು ಸಹಿತ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಮೂವರನ್ನು ಪೊಲೀಸರು ಸೋಮವಾರ ಪೇಟೆಯ ಅರಣ್ಯದಲ್ಲಿ  ಮಂಗಳವಾರ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಹಣ ಸಾಗಿಸುತ್ತಿದ್ದ ವಾಹನವು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಅನಾಥವಾಗಿ ಪತ್ತೆಯಾಗಿತ್ತು.

 ಎಸ್‌ಐಎಸ್‌ ಪ್ರೊಸೆಕ್ಯುರ್‌ ಹೋಲ್ಡಿಂಗ್ಸ್‌ ಕಂಪೆನಿ ವಾಹನದಲ್ಲಿದ್ದ ಚಾಲಕ ಕರಿಬಸವ, ಬೆಂಗಾವಲು ರಕ್ಷಕ ಪರಶುರಾಮ, ಗನ್‌ ಮ್ಯಾನ್‌ಗಳಾದ ಬಸಪ್ಪ ಮತ್ತು ಪೂವಣ್ಣ  7.5 ಕೋಟಿ ರೂ. ಹಣ ಸಹಿತ ವಾಹನ ಪರಾರಿಯಾಗಿದ್ದರು.

ಆರೋಪಿಗಳಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದ ಮಂಗಳೂರು ಪೊಲೀಸರ ತಂಡ ಕೊಡಗು ಪೊಲೀಸರ ನೆರವಿನೊಂದಿಗೆ ಮೂವರನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

 

No Comments

Leave A Comment