Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಬಿಹಾರ: ರಸ್ತೆ ಬದಿ ನಿಂತಿದ್ದ ಲಾರಿಗೆ ಎಸ್ಯುವಿ ಡಿಕ್ಕಿ, 5 ಸಾವು

ಲಾಖೀಸರಾಯ್(ಬಿಹಾರ): ರಸ್ತೆ ಬದಿ ನಿಂತಿದ್ದ ಲಾರಿಗೆ ಎಸ್ಯುವಿ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದು 10 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಲಾಖೀಸರಾಯ್ ಜಿಲ್ಲೆಯ ಮಹಿಸೋನಾ ಗ್ರಾಮದಲ್ಲಿ ಬಳಿ ಇಂದು ಬೆಳಗ್ಗೆ 3.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು ಹತ್ತು ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾನೆಯಾಗಿದ್ದರಿಂದ ಎಸ್ಯುವಿ ವಾಹನದ ಚಾಲಕ ನಿದ್ದೆಗೆ ಜಾರಿದ್ದು ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಹಾಗೂ ಗಾಯಾಳುಗಳು ಮುಜಫರ್ ಜಿಲ್ಲೆಯ ಮುಶಾಹರಿ ಗ್ರಾಮದವರೆಂದು ತಿಳಿದುಬಂದಿದೆ. ಇವರೆಲ್ಲಾ ಜಾರ್ಖಂಡ್ ನ ದೇವಗಢ ಜಿಲ್ಲೆಯ ಬಾಬಾಧಾಮ್ ಎಂಬಲ್ಲಿ ಮುಖಂಡನ ಸಂಸ್ಕಾರವನ್ನು ಮುಗಿಸಿ ತಮ್ಮ ಊರಿಗೆ ಮರಳುತ್ತಿದ್ದರು.

No Comments

Leave A Comment