Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಒಡಿಶಾ: ಆಸ್ಪತ್ರೆ ಆವರಣದಲ್ಲಿ ಬೀದಿಗೆ ನಾಯಿಗಳಿಗೆ ಆಹಾರವಾಯ್ತು ನವಜಾತ ಶಿಶುವಿನ ಮೃತದೇಹ!

ಕೋರಾಪುತ್: ಒಡಿಶಾ ರಾಜ್ಯ ಕೋರಾಪತ್ ಜಿಲ್ಲೆಯ ಜೇರೋಪ್ ನಲ್ಲಿರುವ ಉಪ ವಿಭಾಗೀಯ ಆಸ್ಪತ್ರೆಯ ಆವರಣವೊಂದರಲ್ಲಿ ನಜಜಾತ ಶಿಶುವಿನ ಮೃತದೇಹವನ್ನು ಬೀದಿ ನಾಯಿಯೊಂದು ಎಳೆದಾಡಿ ತಿಂದಿರುವ ಘಟನೆ ನಡೆದಿದೆ.

ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೃತದೇಹವನ್ನು ನಾಯಿಯೊಂದು ಎಳೆದಾಡಿ ತಿನ್ನುತ್ತಿದ್ದ ಭೀಕರ ದೃಶ್ಯವನ್ನು ಕಂಡು ಸ್ಥಳದಲ್ಲಿದ್ದ ಜನರು ದಂಗಾಗಿದ್ದಾರೆ.

ನಾಯಿ ಮಗುವನ್ನು ತಿನ್ನುತ್ತಿದ್ದರೂ ಸ್ಥಳದಲ್ಲಿ ನಿಂತಿದ್ದ ಯಾರೊಬ್ಬರೂ ಮಗುವಿನ ಮೃತದೇಹವನ್ನು ಕಾಪಾಡುವ ಕೆಲಸಕ್ಕೆ ಮುಂದಾಗಿಲ್ಲ. ಕೆಲವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ದೃಶ್ಯಾವಳಿಗಳನ್ನು ಸೆರೆಹಿಡಿಯುವಲ್ಲಿ ಕಾರ್ಯನಿರತರಾಗಿದ್ದಾರೆ.

ಸುದ್ದಿ ತಿಳಿದು ಖುದ್ದಾಗಿ ನಾನೇ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿದ್ದೆ. ಆದರೆ, ಸ್ಥಳದಲ್ಲಿ ಅಂತಹ ಯಾವುದೇ ದೃಶ್ಯಾವಳಿಗಳು ನನ್ನ ಕಣ್ಣಿಗೆ ಬೀಳಲಿಲ್ಲ. ಮಗುವಿನ ದೇಹವಾಗಲೀ, ನಾಯಿಯಾಗಲಿ ಕಂಡುಬರಲಿಲ್ಲ. ನಮ್ಮ ಆಸ್ಪತ್ರೆಯಲ್ಲಿ ಯಾವುದೇ ರೋಗಿಗಳೂ ನಾಪತ್ತೆಯಾಗಿಲ್ಲ ಎಂದು ಉಪ ವಿಭಾಗೀಯ ವೈದ್ಯಕೀಯ ಅಧಿಕಾರಿ ಸಿತಾನ್ಶು ಸಿತಾಪತಿಯವರು ಹೇಳಿದ್ದಾರೆ.

ಘಟನೆ ಸಂಬಂಧ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಿರಿಯ ಆಧಿಕಾರಿಗಳು ಮೊಬೈಲ್ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆಂದು ತಿಳಿಸಿದ್ದಾರೆ.

No Comments

Leave A Comment