Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಬಸ್ಸು ಮಗುಚಿ ಗಟಾರಕ್ಕೆ ಉರುಳಿ ಐವರ ಸಾವು; 50 ಮಂದಿಗೆ ಗಾಯ

ನವಾಡ : ಇಂದು ಸೋಮವಾರ ನಸುಕಿನ ವೇಳೆ ನವಾಡ ಜಿಲ್ಲೆಯಲ್ಲಿ ಇಟ್ಟಿಗೆ ಕಾರ್ಖಾನೆಯ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ಬಸ್ಸು ಅಡಿಮೇಲಾಗಿ ಗಟಾರಕ್ಕೆ ಉರುಳಿ ಬಿದ್ದ ಪ್ರಯುಕ್ತ ಐವರು ಮಡಿದು ಇತರ 50ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಾಳುಗಳಲ್ಲಿ 12 ಮಂದಿಯ ಪರಿಸ್ಥಿತಿ ಗಂಭೀರವಿದೆ.

ಐವರು ಮೃತರಲ್ಲಿ ಇಬ್ಬರು ಅಪ್ತಾಪ್ತ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಸುಕಿನ ವೇಳೆ ಬಸ್‌ ಚಾಲಕನಿಗೆ ನಿದ್ದೆಯ ಮಂಪರು ಕವಿದ ಕಾರಣ ಆತನಿಗೆ ವಾಹನದ ಮೇಲೆ ನಿಯಂತ್ರಣ ತಪ್ಪಿ ಈ ಭೀಕರ ಅವಘಡ ಸಂಭವಿಸಿದೆ ಎಂದು ರಾಜೋಲಿ ಪೊಲೀಸ್‌ ಠಾಣೆಯ ಪ್ರಭಾರಾಧಿಆರಿ ಅವಧೀಶ್‌ ಕುಮಾರ್‌ ತಿಳಿಸಿದ್ದಾರೆ.

ನಲಂದಾದ ಜಿಲ್ಲಾ ಮುಖ್ಯ ಪಟ್ಟಣವಾಗಿರುವ ಬಿಹಾರ್‌ಷರೀಫ್ ಗೆ ಬಸ್ಸು ಹೋಗುತ್ತಿದ್ದಾಗ ನಸುಕಿನ 2 ಗಂಟೆಯ ವೇಳೆಗೆ ಅಂಧರ್‌ಬಾರಿ ಗ್ರಾಮದಲ್ಲಿನ ಎನ್‌ಎಚ್‌ 31ರಲ್ಲಿ ಈ ಅವಘಡ ಸಂಭವಿಸಿತು.

No Comments

Leave A Comment