ತಮಿಳುನಾಡಿನಲ್ಲಿ ಭೀಕರ ಅಪಘಾತ: ಕಾಸರಗೋಡಿನ ನವದಂಪತಿ ಸೇರಿ 7 ಬಲಿಕಾಸರಗೋಡು : ತಮಿಳುನಾಡಿನ ಕರೂರು ಬಳಿ ಲಾರಿ ಢಿಕ್ಕಿ ಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾಸರಗೋಡಿನ ನವದಂಪತಿಗಳು ಸೇರಿ ಒಂದೇ ಕುಟುಂಬದ 7 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಶನಿವಾರ ಬೆಳಗ್ಗೆ ಸಂಭವಿಸಿದೆ.ವರದಿಯಾದಂತೆ ಮೃತ ದುರ್ದೈವಿಗಳು ಕಾಸರಗೋಡಿನ ಕಯ್ಯಾರುವಿನಿಂದ ವೆಲಂಕಣಿಗೆ ಯಾತ್ರೆಗೆ ತೆರಳಿದ್ದರು. ಮೃತರು ನವದಂಪತಿಗಳಾದ ಅಲ್ವಿನ್ ಮೊಂತೆರೊ,ಪತ್ನಿ ಪ್ರಿಮಾ, ಅಲ್ವಿನ್ ಸಹೋದರ ಹೆರಾಲ್ಡ್ ,ಪತ್ನಿ ಪ್ರಸಿಲ್ಲಾ, ಕ್ಯಾಥರೀನ್, ಶೆರೋನ್ ಮತ್ತು ರೋಹಿತ್ ಎಂದು ತಿಳಿದು ಬಂದಿದೆ.ಎಲ್ಲರೂ ಸ್ಥಲದಳೇ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲರೂ ಮಂಡೆಕಾಪು ನಿವಾಸಿಗಳಾಗಿದ್ದರು ಕೆಲವರು ಮುಂಬಯಿಯಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.