Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

“ದಿ ಗೇಮ್ ಚೇಂಜರ್” ಜಿಎಲ್ಎಲ್ ವಿ ಮಾರ್ಕ್ 3 ರಾಕೆಟ್ ಜೂನ್ ನಲ್ಲಿ ಉಡಾವಣೆ!

ನವದೆಹಲಿ: ಭಾರತದ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹಕ ಎಂದೇ ಖ್ಯಾತಿಗಳಿಸಿರುವ “ದಿ ಗೇಮ್ ಚೇಂಜರ್” ಜಿಎಲ್ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಜೂನ್ ಮೊದಲ ವಾರದಲ್ಲಿ ಉಡಾಯಿಸಲಾಗುತ್ತದೆ ಎಂದು  ತಿಳಿದುಬಂದಿದೆ.ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಯೋಜನೆಗಳಲ್ಲೇ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜಿಎಲ್ಎಲ್ ವಿ ಮಾರ್ಕ್ 3 ರಾಕೆಟ್  ಉಡಾವಣೆಯನ್ನು ಮುಂಬರುವ ಜೂನ್ ಮೊದಲ ವಾರದಲ್ಲಿ ನಡೆಸಲಾಗುತ್ತದೆ  ಎಂದು ಇಸ್ರೋ ತಿಳಿಸಿದೆ.

ಭಾರತದಲ್ಲಿರುವ ಉಡಾವಣಾ ವಾಹಕಗಳಲ್ಲೇ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದು ಖ್ಯಾತಿಗಳಿಸಿರುವ ಜಿಎಲ್ಎಲ್ ವಿ ಮಾರ್ಕ್ 3 ರಾಕೆಟ್  ಉಡಾವಣೆಗೆ ಇಸ್ರೋ ಸಂಸ್ಥೆ ಸಕಲ ಸಿದ್ಧತೆ  ಮಾಡಿಕೊಳ್ಳುತ್ತಿದ್ದು. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಬಹು ಉದ್ದೇಶಿತ ಜಿಎಲ್ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಜೂನ್ ಮೊದಲ ವಾರದಲ್ಲಿ  ಉಡಾಯಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಹಾಗೂ ಖ್ಯಾತ ವಿಜ್ಞಾನಿ ಕಿರಣ್ ಕುಮಾರ್ ತಿಳಿಸಿದ್ದಾರೆ.ಪ್ರಸ್ತುತ ರಾಕೆಟ್ ಗೆ ತಾಂತ್ರಿಕ ಸಲಕರಣೆಗಳ ಜೋಡಣೆಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಈ ಕಾರ್ಯ ಪೂರ್ಣಗೊಂಡು ರಾಕೆಟ್ ಉಡಾವಣೆಗೆ ಸಿದ್ಧವಾಗಲಿದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.“ದಿ ಗೇಮ್ ಚೇಂಜರ್” ಜಿಎಲ್ಎಲ್ ವಿ ಮಾರ್ಕ್ 3 ವಿಶೇಷತೆಜಿಎಸ್ ಎಲ್ ವಿ ಮಾರ್ಕ್ 3 ಪ್ರಸ್ತುತ ಭಾರತದಲ್ಲಿರುವ ರಾಕೆಟ್ ಗಳಲ್ಲೇ ಅತ್ಯಂತ ಶಕ್ತಿಶಾಲಿ ನೌಕೆಯಾಗಿದ್ದು, ಬರೊಬ್ಬರಿ 4 ಟನ್ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯಹೊಂದಿದೆ. ಇದಲ್ಲದೆ ಬಾಹ್ಯಾಕಾಶಕ್ಕೆ  ಮಾನವ ಸಹಿತ ನೌಕೆ ಕಳುಹಿಸಬೇಕು ಎನ್ನುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗೂ ಇದು ನೆರವಾಗಲಿದೆ. ಇದೇ ಕಾರಣಕ್ಕೆ ಈ ಹಿಂದೆ ನಡೆದ ಪರೀಕ್ಷಾರ್ಥ ಉಡಾವಣೆ ಹಾಗೂ ಪ್ರಸ್ತುತ ನಡೆಯುತ್ತಿರುವ ಉಡಾವಣೆ ಸಾಕಷ್ಟು  ಮಹತ್ವ ಪಡೆದುಕೊಂಡಿದೆ.

ಜಿಎಲ್‌ವಿ ಮಾರ್ಕ್ 3 3650 ಕೆಜಿ ತೂಕದ  ಅತ್ಯಾಧುನಿಕ ರಾಕೆಟ್ ಆಗಿದ್ದು,  4 ಸಾವಿರ ಕೆಜಿ ತೂಕದ ಸ್ಪೇಸ್ ಕ್ಯಾಪ್ಸೂಲ್ ಗಳನ್ನು (ಉಪಗ್ರಹಗಳು)ನ್ನು ಹೊರಬಲ್ಲ ಸಾಮರ್ಥ್ಯ ಹೊಂದಿದೆ. ರಾಕೆಟ್ ಗೆ ಕ್ರಯೋಜನಿಕ್ ಇಂಜಿನ್  ಅಳವಡಿಸಿದ್ದು, ಈ ವ್ಯವಸ್ಥೆ ಹೊಂದಿದ ದೇಶದ ಮೊದಲ ರಾಕೆಟ್ ಎಂಬ ಕೀರ್ತಿಗೂ ಜಿಎಸ್ ಎಲ್ ವಿ ಮಾರ್ಕ್ 3 ಪಾತ್ರವಾಗಿದೆ

No Comments

Leave A Comment