Log In
BREAKING NEWS >
ಕರಾವಳಿಯಲ್ಲಿ ಭಾರೀ ಮಳೆ-ಹಲವೆಡೆಯಲ್ಲಿ ನೆರೆ...ಜೂನ್ 22ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಅನುಗ್ರಹ ಲಕ್ಷ್ಮೀವೃತ ಕಾರ್ಯಕ್ರಮವು ಜರಗಲಿದೆ....

ಕನ್ನಡ ನಟಿ ನಗ್ನಚಿತ್ರಗಳಿಗೆ ನಟಿಯರ ಮುಖ: ಸೈಬರ್‌ ಠಾಣೆಗೆ ನಟಿ ಶ್ರುತಿ ಹರಿಹರನ್‌ ದೂರು

ಬೆಂಗಳೂರು: ‘ನಗ್ನಚಿತ್ರಗಳಿಗೆ ನಟಿಯರ ಮುಖ ಅಂಟಿಸುತ್ತಿರುವ ದುಷ್ಕರ್ಮಿಗಳು, ಅಂಥ ಚಿತ್ರಗಳನ್ನು  ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ’ ಎಂದು ನಟಿ ಶ್ರುತಿ ಹರಿಹರನ್‌ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸ್‌ ಕಮಿಷನರ್‌ ಕಚೇರಿಗೆ ಬಂದಿದ್ದ ಅವರು, ‘ದುಷ್ಕರ್ಮಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಫೇಸ್‌ಬುಕ್‌ ಹಾಗೂ ಟ್ವಿಟರ್‌ನ ಕೆಲ ಖಾತೆಗಳಲ್ಲಿ ಕನ್ನಡ ನಟಿಯರ ಮುಖವಿರುವ ಚಿತ್ರಗಳನ್ನು ಹರಿದುಬಿಡಲಾಗಿದೆ. ಅದರೊಂದಿಗೆ ನನ್ನ ಚಿತ್ರಗಳೂ ಇವೆ. ಇದರಿಂದ ಮನಸ್ಸಿಗೆ ನೋವಾಗಿದ್ದು, ಅಂಥ ಕೃತ್ಯ ಎಸಗುತ್ತಿರುವ ದುಷ್ಕರ್ಮಿಗಳು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಮಹಿಳೆಗೆ ಗೌರವದ ಸ್ಥಾನವಿದೆ. ಅವರ ನಗ್ನಚಿತ್ರಗಳನ್ನು ಈ ರೀತಿ ಪ್ರಕಟಿಸುವುದು  ಸರಿಯಲ್ಲ. ನಟಿಯರನ್ನು ಕೀಳಾಗಿ ನೋಡುವ ಮನಸ್ಥಿತಿಯುಳ್ಳ ಜನರೇ ಇಂಥ ಕೃತ್ಯ ಎಸಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ದೂರು ಪಡೆದು ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ದುಷ್ಕರ್ಮಿಗಳು ನಕಲಿ ಖಾತೆ ತೆರೆದು ಇಂಥ ಕೆಲಸ ಮಾಡುತ್ತಿದ್ದಾರೆ’ ಎಂದು ಸೈಬರ್‌ ಠಾಣೆಯ ಅಧಿಕಾರಿ ಹೇಳಿದರು.

No Comments

Leave A Comment