Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಬೆಂಗಳೂರು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಮೊದಲ ಸ್ಥಾನ, ಬೀದರ್ ಕೊನೆ ಸ್ಥಾನ

ಬೆಂಗಳೂರು : ಮಹತ್ವದ 2016-17 ನೇ ಸಾಲಿನ ಎಸ್ಸೆಸೆಲ್ಸಿ ಫ‌ಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದ ಪೈಕಿ  67.81 %  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಿಯುಸಿಯಲ್ಲಿ ಮೊದಲ ಸ್ಥಾನ ಪಡೆದ ಉಡುಪಿ ಜಿಲ್ಲೆ ಇಲ್ಲೂ ಮೊದಲ ಸ್ಥಾನ ಪಡೆದಿದ್ದು, ಪಿಯುಸಿಯಲ್ಲಿ ಕೊನೆ ಸ್ಥಾನ ಪಡೆದ ಬೀದರ್‌ ಮತ್ತೆ ಕೊನೆಯ ಸ್ಥಾನ ಪಡೆದಿದೆ.

ಶಿಕ್ಷಣ ಸಚಿವ ತನ್ವೀರ್‌ ಸೇಠ್ ಅವರು ಸುದ್ದಿಗೋಷ್ಠಿ ನಡೆಸಿ ಫ‌ಲಿತಾಂಶದ ವಿವರಗಳನ್ನು ನೀಡಿದರು. ಈ ಬಾರಿ ಕಳೆದ ಬಾರಿಗಿಂತ 8 % ಫ‌ಲಿತಾಂಶ ಕಡಿಮೆಯಾಗಿದೆ ಎಂದು ಅಂಕಿ ಅಂಶ ನೀಡಿದರು. ಪರೀಕ್ಷೆಗೆ ಹಾಜರಾದ 7,64,940 ವಿದ್ಯಾರ್ಥಿಗಳ ಪೈಕಿ 67.81% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ ಎಂದು ತಿಳಿಸಿದರು.

3 ವಿದ್ಯಾರ್ಥಿಗಳು625ಕ್ಕೆ 625 ಅಂಕ ಪಡೆದ ಸಾಧನೆ ಮಾಡಿದ್ದರೆ, 6 ವಿದ್ಯಾರ್ಥಿಗಳು  624 ಅಂಕ ,23 ವಿದ್ಯಾರ್ಥಿಗಳು 623 ಅಂಕಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

89.72% ಫ‌ಲಿತಾಂಶದೊಂದಿಗೆ ಉಡುಪಿ ಮೊದಲ ಸ್ಥಾನ ಅಲಂಕರಿಸಿದರೆ, 88.1% ಫ‌ಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ 2 ನೇ ಸ್ಥಾನ ಪಡೆದಿದೆ. ಚಿಕ್ಕೋಡಿ 3ನೇ ಸ್ಥಾನ ಪಡೆದಿದೆ.

http://karresults.nic.in/ ವೆಬ್‌ಸೈಟಿನಲ್ಲಿ ಇಂದು ಮಧ್ಯಾಹ್ನ 3 ಗಂಟೆಯ ಬಳಿಕ ಫ‌ಲಿತಾಂಶ ಲಭ್ಯವಾಗಲಿದೆ.
ಫಲಿತಾಂಶ ವೀಕ್ಷಿಸುವ ವೆಬ್‌ಸೈಟ್‌ಗಳು:
http://karresults.nic.in
http://sslc.kar.nic.in

 

No Comments

Leave A Comment