Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಉತ್ತರಪ್ರದೇಶ: ಕಾರು-ಟ್ರಕ್ ಮುಖಾಮುಖಿ ಡಿಕ್ಕಿ- 7 ಸಾವು, 6 ಜನರಿಗೆ ಗಾಯ

ರಾಮ್ಪುರ: ಉತ್ತರಪ್ರದೇಶದ ರಾಮ್ಪುರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 7 ಜನರು ಸಾವನ್ನಪ್ಪಿ 6 ಮಂದಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ.

ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಮದುವೆ ಸಮಾರಂಭವೊಂದಕ್ಕೆ ಹೋಗಿ ಕುಟುಂಬವೊಂದು ಕಾರಿನಲ್ಲಿ ಬರುತ್ತಿತ್ತು. ಈ ವೇಳೆ ಚಾಲಕ ಕಾರಿನ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ನಂತರ ಎದುರಿಗೆ ಬರುತ್ತಿದ್ದ ಟ್ರಕ್ ಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿವೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಕೆ.ಕೆ. ಚೌಧರಿ, ಅಪಘಾತ ಸಂಭವಿಸಿದ ನಂತರ ಸ್ಥಳೀಯ ಜನರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದರು. ಪ್ರಸ್ತುತ ಗಾಯಾಳುಗಳು ಮೀರುತ್ ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಿದ್ದಾರೆ.

ಅಪಘಾತ ದುರಾದೃಷ್ಟಕರ ಎಂದಿರುವ ಬಿಜೆಪಿ ನಾಯಕ ಬಲ್ದೇವ್ ಸಿಂಗ್ ಔಲಾಖ್ ಅವರು, ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಘಟನೆ ಕುರಿತಂತೆ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು, ಶೀಘ್ರದಲ್ಲಿಯೇ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಬಲ್ದೇವ್ ಸಿಂಗ್ ತಿಳಿಸಿದ್ದಾರೆ.

No Comments

Leave A Comment