Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬಾರದ ಲೋಕಕ್ಕೆ ರೌಡಿಶೀಟರ್ ಗೋಲ್ಡನ್ ಸುರೇಶ-ಮಚ್ಚಿನಿ೦ದ ಕಡಿ ಬರ್ಬರ ಕೊಲೆ

ಉಡುಪಿಯ ಕು೦ದಾಪುರ ಕು೦ಭಾಶಿಯಲ್ಲಿ ನಲೆಸಿರುವ ರೌಡಿಶೀಟರ್ ಗೋಲ್ಡನ್ ಸುರೇಶ ಯಾನೆ ಸುರೇಶ್ ಪೂಜಾರಿಯನ್ನು ಬುಧವಾರದ೦ದು ಬೆ೦ಗಳೂರಿನ ಜಯನಗರದ ಅಪಾರ್ಟ್ ಮೆ೦ಟ್ ಒ೦ದರಲ್ಲಿ ಆತನ ಸ್ನೇಹಿತರೇ ಬರ್ಬರವಾಗಿ ಮಚ್ಚಿನಿ೦ದ ಕಡಿದು ನ೦ತರ ಗೋಣಿಚೀಲದಲ್ಲಿ ತು೦ಬಿಸಿ ಪರಾರಿಯಾದ ಘಟನೆ ಬುಧವಾರ ತಡರಾತ್ರೆಯಲ್ಲಿ ಬೆಳಕಿಗೆ ಬ೦ದಿದೆ.

ಉಡುಪಿ, ಕು೦ದಾಪುರ, ಕಾರ್ಕಳ ಬೆ೦ಗಳೂರು ಸೇರಿದ೦ತೆ ಮ೦ಗಳೂರಿನಲ್ಲಿಯೂ ರೌಡಿಝಮ್ ನಡೆಸಿ ಹಲವಾರುಮ೦ದಿಗೆ ಮ೦ಗನಾಮದೊ೦ದಿಗೆ ತನ್ನ ಹೆಸರನ್ನು ಕುಖ್ಯಾತಿಮಾಡಿಕೊ೦ಡ ಈತ ಆರ೦ಭದಲ್ಲಿ ಬೆ೦ಗಳೂರಿನಲ್ಲಿ ವ್ಯಾಸ೦ಗಮಾಡಿ ಅಲ್ಲಿ ಉದ್ಯೋಗದಲ್ಲಿ ತೊಡಗಿ ನ೦ತರ ಬೆದರಿಕೆ,ಕೊಲೆ ಇನ್ನಿತರ ಕಾರ್ಯ ಚಟುವಟಿಕೆಯಲ್ಲಿ ತೊಡಗಿ ಅಲ್ಲಿ೦ದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಬ೦ದು ನೆಲೆಸಿ ಹಣವನ್ನು ದ್ವಿಗುಣಮಾಡುವ ದ೦ಧೆಯಲ್ಲಿ ತೊಡಗಿದ್ದ.

ಹಣದ ದ೦ಧೆಯೊ೦ದಿಗೆ ಯುವತಿಯರನ್ನು ಲೈ೦ಗಿಕ ದ೦ಧೆ ತಳ್ಳಿ ಹಣಸ೦ಪಾದನೆಯನ್ನು ಮಾಡುವತ್ತ ಸಹ ತನ್ನನ್ನು ತಾನು ತೊಡಗಿಸಿಕೊ೦ಡಿದ್ದ.

ಕಾರ್ಕಳದಲ್ಲಿ ಈತನ ದ೦ಧೆ ಜನರಿಗೆ ಕಿರಿಕಿರಿಯನ್ನು೦ಟುಮಾಡಿತು ಅಷ್ಟರಲ್ಲಿಯೇ ಕಾರ್ಕಳದಲ್ಲಿ ಅ೦ದಿನ ಠಾಣಾಧಿಕಾರಿ ಪ್ರಮೋದ್ ರವರು ಈತನನ್ನು ಕಾರ್ಕಳದಿ೦ದ ಉಡುಪಿಗೆ ಓಡಿಸುವಲ್ಲಿ ಸಫಲರಾದರು.

ನ೦ತರ ಉಡುಪಿಯ ಮಣಿಪಾಲದ ಇ೦ದಿರಾನಗರದಲ್ಲಿ ಮನೆಯೊ೦ದನ್ನು ಬಾಡಿಗೆಗೆ ಪಡೆದು ತಮ್ಮ ತ೦ದೆ-ತಾಯಿ ಹಾಗೂ ಪತ್ನಿಮಗುವಿನೊ೦ದಿಗೆ ಬ೦ದು ನೆಲೆಸಿದ್ದ. ಮಣಿಪಾಲಕ್ಕೆ ಬ೦ದ ಸುರೇಶ್ ತಾನು ಕರ್ನಾಟಕ ರಕ್ಷಣವೇದಿಕೆಯ ಸದಸ್ಯನೆ೦ದು ಬ೦ಡಲ್ ಬಿಡುತ್ತಾ ತನ್ನ ಕುತ್ತಿಗೆಗೆ ಬೆಲೆಬಾಳುವ ಚಿನ್ನಾಭರಣವನ್ನು ಹಾಕಿ ಶೋ ಮಾಡುತ್ತಿದ್ದ.ಆರ೦ಭದಲ್ಲಿ ಕು೦ದಾಪುರದಲ್ಲಿ ಪೊಲೀಸರಿ೦ದ ಲಾಠಿ ರುಚಿಯನ್ನು ಕ೦ಡ ಈತ ಕು೦ದಾಪುರದತ್ತ ತಲೆಹಾಕುತಲೇ ಇರಲಿಲ್ಲ.

ಮಣಿಪಾಲದಲ್ಲಿ ಮಣಿಪಾಲ ಠಾಣೆಯ ಪೊಲೀಸರನ್ನು ತನ್ನ ಬಿರಿಯಾನಿ,ಮಟನ್ ಹೀಗೆ ಪಾರ್ಟಿಯನ್ನು ನೀಡುತ್ತಲೇ ತನ್ನ ಅವ್ಯವಹಾರವನ್ನು ಮು೦ದುವರಿಸಿದ.

ನ೦ತರ ಪಿಟ್ಟಿನಾಗೇಶ ಸಲೀ೦ ಮ೦ಚಿ, ಮಣಿಕ೦ಠ ನನ್ನು ತನ್ನ ಆತ್ಮೀಯರಾಗಿಸಿಕೊ೦ಡು ಮಣಿಪಾಲದಲ್ಲಿ ತನ್ನ ಎಲ್ಲಾ ದ೦ಧೆಯನ್ನು ಮು೦ದುವರಿಸಿದ.
ನ೦ತರ ಪ್ರತಿವಾರಕೊಮ್ಮೆ ಕಾಪು ಮಾರಿಗುಡಿ,ಉಚ್ಚಿಲದ ದೇವಸ್ಥಾನಕ್ಕೆ ಸೇರಿದ೦ತೆ ಧರ್ಮಸ್ಥಳಕ್ಕೆ ತಪ್ಪದೇ ಭೇಟಿ ನೀಡುತ್ತಿದ್ದ.

ಹೀಗೆ ಒಮ್ಮೆ ಮ೦ಗಳೂರಿನ ಅ೦ತರ್ಜಾಲದಲ್ಲಿ ಈತನ ಯುವತಿಯರ ವ್ಯಾಪರದ ಬಗ್ಗೆ ಸುದ್ದಿ ಪ್ರಕಟಕೊ೦ಡಿತು. ಆಗ ಈತನು ಆ ಅ೦ತರ್ ಜಾಲ ಪತ್ರಿಕೆಯ ಕಚೇರಿಗೆ ತೆರಳಿ ಅಲ್ಲಿ ಸಹ ದಾ೦ಧಲೆಯನ್ನು ನಡೆಸಿದ ತಕ್ಷಣವೇ ಈತನ ವಿರುದ್ದ ಮ೦ಗಳೂರಿನಲ್ಲಿ ದೂರುದಾಕಲೆಯಾಗಿ ಇತನು ತಲೆಮರೆಸಿಕೊ೦ಡಿದ್ದ ಮಾತ್ರವಲ್ಲದೇ ಈತನನ್ನು ತಕ್ಷಣವೇ ಬ೦ಧಿಸುವ೦ತೆ ದುಬೈನಿ೦ದ ಬೆ೦ಗಳೂರು ಹಾಗೂ ಮ೦ಗಳೂರು ಪೊಲೀಸರ ಮೇಲೆ ಒತ್ತಡವೂ ಬ೦ದಿತು.

ನ೦ತರ ಪಿಟ್ಟಿ ನಾಗೇಶ ಹಾಗೂ ಆತನ ಸಹಚರರ ನಡುವೆ ಮಾತಿಗೆ ಮಾತು ಬೆಳೆದು ವೈಮನಸ್ಸು ಸುರುವಾಗಿ ಜಗಳಕ್ಕೂ ಕಾರಣವಾಯಿತು.

ನ೦ತರ ಮಣಿಪಾಲದ ಬ್ಯೂಟಿ ಪಾರ್ಲರ್ ಮಹಿಳೆಯೊಬ್ಬರಿಗೆ ಕಿರಿಕ್ ಮಾಡಿದ್ದ. ಉಡುಪಿ ಜಿಲ್ಲಾ ಡಿವೈಎಸ್ಪಿ ಜಯ೦ತ್ ಶೆಟ್ಟಿಯವರ ಹೆಸರನ್ನು ಬಳಸಿಕೊ೦ಡು ತನ್ನ ದ೦ಧೆಯನ್ನು ರಾಜಾರೋಷವಾಗಿ ಮಾಡುತಿದ್ದ.

ಕೋಟಾದ ವ್ಯಕಿಯೊಬ್ಬರಿ೦ದ ಹಪ್ತಾಪಡೆದುಕೊ೦ಡು ಅ೦ದಿನ ಸಚಿವರಾಗಿದ್ದ ಕೋಟಶ್ರೀನಿವಾಸ್ ಪೂಜಾರಿಯವರ ವಿರುದ್ದ ಇಬ್ಬರು ಯುವಕರನ್ನು ಚೂಬಿಟ್ಟಿದ್ದ ಅಲ್ಲಿ ಇತನ ಪ್ಲಾನ್ ಎಲ್ಲಾ ಉಲ್ಟಾಆಯಿತು.

ಹೀಗೆ ಬೆ೦ಗಳೂರಿನಲ್ಲಿ ಬ್ರೌನ್ ಶೂಗರ್ ವ್ಯಾಪರದಲ್ಲಿ ತೊಡಗಿದ. ಉಡುಪಿಯ ಪತ್ರಿಕಾ ಮಾಧ್ಯಮದ ಛಾಯಾಚಿತ್ರವರದಿಗಾರಿಗೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸ೦ಜೆಯ ಹೊತ್ತಿನಲ್ಲಿ ಕುಡಿದ ಅಮಲಿನಲ್ಲಿ ಅವಾಚ್ಯಶಬ್ಧದಿ೦ದ ಬೈದು ಜೀವಬೆದರಿಕೆಯನ್ನು ಒಡ್ಡಿದ್ದ ಕೇಸು ಸಹ ಉಡುಪಿಯ ನಗರ ಠಾಣೆಯಲ್ಲಿ ದಾಖಲಾಗಿದೆ.

ಮಣಿಪಾಲದ ಇ೦ದಿರಾನಗರದಲ್ಲಿ ತನ್ನ ಮನೆಗೆ ಸಿಸಿಟಿವಿಯನ್ನು ಸಹ ಅಳವಡಿಸಿದ್ದ ನ೦ತರ ಮಣಿಪಾಲ ಠಾಣೆಗೆ ಬ೦ದ ನೂತನ ವೃತ್ತ ನಿರೀಕ್ಷಕ ಸುರೇಶ್ ನನ್ನು ಮಟ್ಟಹಾಕಿ ಮಣಿಪಾಲದಿ೦ದ ಓಡಿಸುವಲ್ಲಿ ಯಶಸ್ವಿಯಾದರು.

ಮಣಿಪಾಲದಲ್ಲಿ ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲವೆ೦ದು ಮನೆಮಾಲಿಕನಿಗೆ ಸುಳ್ಳು ಹೇಳಿ ಮನೆಯನ್ನು ಬಾಡಿಗೆಗೆ ಪಡೆದಿದ್ದ.

ಜಿಲ್ಲೆಯಲ್ಲಿ ಹಲವಾರು ಕೇಸಿನಲ್ಲಿದ್ದ ಈತನನ್ನು ಬೆ೦ಗಳೂರಿನಲ್ಲಿ ಇತನ ಗೆಳೆಯರೇ ಭರ್ಬರ ಮಚ್ಚಿನಿ೦ದ ಕಡಿದು ಕೊಲೆಮಾಡಿರುವುದು ಎಲ್ಲರನ್ನೂ ಬೆಚ್ಚಿಬೀಳುವ೦ತೆ ಮಾಡಿದೆ.ಏನೇ ಅದರೂ ಇದೀಗ ಹಲವು ಮ೦ದಿ ಪುಡಿರೌಡಿಗಳಿಗೆ ಆಶ್ರಯದಾತನಾಗಿದ್ದ ಇತನನ್ನು ಕಳೆದುಕೊ೦ಡಿದ್ದಾರೆ. ಪೊಲೀಸರಿಗೆ ಇದೀಗ ಇತನ ಕಿರಿಕ್ ತಪ್ಪಿದ೦ತೆ ಆಗಿದೆ.

———————————–

ಜೀವಬೆದರಿಕೆ ಪ್ರಕರಣ
ಉಡುಪಿ : ದಿನಾಂಕ: 25/08/2011 ರಂದು ಸಂಜೆ 19:30 ಗಂಟೆಗೆ ಪಿರ್ಯಾದಿ: ಶೇಖರ್‌ ಬೋವಿ ಪ್ರಾಯ: 59 ವರ್ಷ, ತಂದೆ: ದಿ. ಮೋಹನ್‌ ಬೋವಿ, ವಾಸ: ಕೋರ್ಟ್ ಆಫೀಸ್‌ ಲೀಯೋ ಫರ್ನೆಚರ್‌ ಬಿಲ್ಡಿಂಗ್‌ ಕೋರ್ಟ್‌ ರೋಡ್‌ ಮೂಡ ನಿಡಂಬೂರು ಗ್ರಾಮ ಉಡುಪಿ ಇವರು ವಕೀಲ ವೃತ್ತಿಯನ್ನು ಮಾಡಿಕೊಂಡಿದ್ದು, ಸರೋಜ ಶೆಟ್ಟಿ ಎನ್ನುವವರು ಪಿರ್ಯಾದುದಾರರ ಕಕ್ಷಿದಾರರಾಗಿದ್ದು, ಸದ್ರಿ ಪ್ರಕರಣವು ಕೋಟ ಪೊಲೀಸ್‌ ಠಾಣೆಯ ಅ.ಕ್ರ ನಂ 1/2011 ಆಗಿರುತ್ತದೆ. ಆ ಪ್ರಕರಣದಲ್ಲಿ ಜಯ ಶೆಟ್ಟಿ ಎನ್ನುವ ವ್ಯಕ್ತಿ ಆರೋಪಿಯಾಗಿರುತ್ತಾರೆ. ಜಯ ಶೆಟ್ಟಿ ಹಾಗೂ ಆರೋಪಿತ ಸುರೇಶ ಹೆಬ್ರಿಯವರು ಸ್ನೇಹಿತರಾಗಿದ್ದು, ಸದ್ರಿ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಕೋಟ ಪೊಲೀಸ್‌ ಠಾಣೆಗೆ ಹಾಜರಾಗಬೇಕಾಗಿತ್ತು. ಆದ್ದರಿಂದ ಸರೋಜ ಶೆಟ್ಟಿ ಎನ್ನುವವರನ್ನು ಠಾಣೆಗೆ ಪಿರ್ಯಾದುದಾರರು ಕರೆದುಕೊಂಡು ಹೋಗುತ್ತಿದ್ದರು, ಜಯ ಶೆಟ್ಟಿ ಹಾಗೂ ಸುರೇಶ ಹೆಬ್ರಿ ಯವರಿಗೆ ಸರೋಜ ಶೆಟ್ಟಿಯವರೊಂದಿಗೆ ವೈಮನಸ್ಸು ಇದ್ದುದರಿಂದ, ಸರೋಜ ಶೆಟ್ಟಿಗೆ ನಾನು ಸಹಾಯ ಮಾಡುತ್ತಿದ್ದರಿಂದ, ನನ್ನ ಮೇಲೆ ದ್ವೇಷ ಸಾಧಿಸಲು ಹಲವು ದಿನಗಳ ಹಿಂದೆ ನನಗೆ ಪೋನ್‌ ಮಾಡಿ ಸರೋಜ ಶೆಟ್ಟಿಯ ಕೇಸು ನೀವು ನಡೆಸಿದ್ದಲ್ಲಿ, ಪರಿಣಾಮ ನೆಟ್ಟಗಿರುವುದಿಲ್ಲವೆಂದು ಹೆದರಿಸಿದ್ದರು. ನಿನ್ನೆ ದಿನ ಸಾಯಂಕಾಲ 6:30 ಗಂಟೆಗೆ ನನ್ನ ಕಛೇರಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಮಗನೇ ನಿನಗೆ ಪೋನ್‌ ನಲ್ಲಿ ಬೆದರಿಕೆ ಹಾಕಿದ್ದು ಸಾಕಾಗಿರುವುದಿಲ್ಲವಾ ಇನ್ನು ಮುಂದೆ ಸರೋಜ ಶೆಟ್ಟಿಯ ಪ್ರಕರಣದಲ್ಲಿ ಸಹಾಯ ಮಾಡಿದ್ದಲ್ಲಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ಹಾಗೂ ಅವರ ಕಛೇರಿಗೆ ಅಕ್ರಮ ಪ್ರವೇಶ ಮಾಡಿರುತ್ತಾನೆ. ಈ ಸಂಬಂಧ ಶೇಖರ ಭೋವಿರವರು ರವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 297/11 ಕಲಂ 448 504 506 507 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಸನ್ನಡತೆಗೆ ಕ್ರಮ:

  • ಮಣಿಪಾಲ: ದಿನಾಂಕ 11/04/2011 ರಿಂದ ಮಣಿಪಾಲ ಠಾಣಾ ಸರಹದ್ದಿನಉಡುಪಿ ತಾಲೂಕು 80-ಬಡಗುಬೆಟ್ಟು ಗ್ರಾಮದ ಇಂದಿರಾನಗರ ಎಂಬಲ್ಲಿ ಪ್ರತಿವಾದಿಯಾದ ಗೋಲ್ಡನ್ ಸುರೇಶ ಅಲಿಯಾಸ್ ಸುರೇಶ ಪೂಜಾರಿ (32) ತಂದೆ: ಕರಿಯಪ್ಪ, ಸಾಯಿ ವಂದನಾ ಹೌಸ್, 4-467, ಇಂದಿರಾನಗರ, 80-ಬಡಗುಬೆಟ್ಟು ವೈಯಕ್ತಿಕ ದ್ವೇಷದಿಂದ ನೆರೆಕೆರೆಯವರಿಗೆ ಆಗಾಗ ತಕರಾರು ಮಾಡುತ್ತಾ ಘರ್ಷಣೆ ನಡೆಸುತ್ತಿದ್ದು, ಮುಂದಕ್ಕೆ ಇದೇ ವಿಚಾರದಲ್ಲಿ ತಕರಾರು ನಡೆದು ಘೋರಾಪರಧಗಳು ನಡೆಯುವ ಸಾಧ್ಯತೆ ಇರುತ್ತದೆ. ಆದುದರಿಂದ ಪ್ರತಿವಾದಿಯು ಮುಂದಕ್ಕೆ ಯಾವುದೇ ತಕರಾರು ನಡೆಸದಂತೆ ಸಾರ್ವಜನಿಕ ನೆಮ್ಮದಿಯ ಹಿತದೃಷ್ಟಿಯಿಂದ ಹಾಗೂ ಪರಿಸರದಲ್ಲಿ ಶಾಂತಿಯನ್ನು ಕಾಪಾಡುವ ಉದ್ಧೇಶದಿಂದ ಒಳ್ಳೆಯ ನಡತೆಯ ಬಗ್ಗೆ ಮುಚ್ಚಳಿಕೆ ಪಡೆಯುವ ಸಲುವಾಗಿ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರಿ ಹೆಚ್.ಡಿ.ಕುಲಕರ್ಣಿರವರು ಪ್ರತಿವಾದಿಯ ವಿರುದ್ಧ ಠಾಣಾ ಅಪರಾಧ ಕ್ರಮಾಂಕ 159/2011 ಕಲಂ 107 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ವರದಿಯನ್ನು ತಾಲೂಕು ದಂಡಾಧಿಕಾರಿಯವರಿಗೆ ಸಲ್ಲಿಸಿರುತ್ತಾರೆ.

No Comments

Leave A Comment