Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ರಾಜಸ್ತಾನದಲ್ಲಿ ಕಲ್ಯಾಣ ಮಂಟಪ ಗೋಡೆ ಕುಸಿತ; 26 ಸಾವು, 28 ಮಂದಿಗೆ ಗಾಯ

ಜೈಪುರ: ಭಾರಿ ಚಂಡಮಾರುತಕ್ಕೆ ಸಿಲುಕಿ ಕಲ್ಯಾಣ ಮಂಟಪದ ಗೋಡೆಯೊಂದು ಕುಸಿದ ಪರಿಣಾಮ ಅದರೊಳಗಿದ್ದ 26 ಮಂದಿ ಸಾವನ್ನಪ್ಪಿ ಸುಮಾರು 28ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ರಾಜಸ್ತಾನದಲ್ಲಿ ಬುಧವಾರ ನಡೆದಿದೆ.

ರಾಜಸ್ತಾನದ ಭಾರತ್ ಪುರ ಜಿಲ್ಲೆಯಲ್ಲಿ ಘಟನೆ ಸಂಭವಿಸಿದ್ದು, ಮದುವೆ ಕಾರ್ಯಕ್ರಮದ ನಿಮಿತ್ತ ಕಲ್ಯಾಣ ಮಂಟಪದಲ್ಲಿ ಸಾಕಷ್ಟು ಮಂದಿ ಸೇರಿದ್ದರು. ಈ ವೇಳೆ ಬುಧವಾರ ರಾತ್ರಿ ದಿಢೀರ್ ವಾತಾವರಣ ಬದಲಾಗಿ ಭಾರಿ ಪ್ರಮಾಣದ  ಚಂಡಮಾರುತ ಬೀಸಿದೆ. ಪರಿಣಾಮ ಚಂಡಮಾರುತದ ಅಬ್ಬರಕ್ಕೆ ಕಲ್ಯಾಣ ಮಂಟಪದ ಗೋಡೆ ಕುಸಿದಿದ್ದು, ಅದರೊಳಗಿದ್ದವರ ಪೈಕಿ 26 ಮಂದಿ ಸಾವ್ನನಪ್ಪಿದ್ದರೆ, 28ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಇನ್ನು ಗೋಡೆ ಹಿಂಭಾಗದಲ್ಲಿ ಹಲವು ಗೂಡಂಗಡಿಗಳು ಇದ್ದು, ಇಲ್ಲಿ ತಿಂಡಿ ಕಾಫಿ ಮಾರಾಟ ಮಾಡಲಾಗುತ್ತಿತ್ತು. ಗೋಡೆ ಕುಸಿದ ಪರಿಣಾಮ ಇಲ್ಲಿಯೂ ಸಾಕಷ್ಟು ಹಾನಿಯಾಗಿದೆ ಎಂದು ತಿಳಿದುಬಂದಿದೆ.ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಿರತರಾಗಿದ್ದಾರೆ. ಅವಶೇಷಗಳಡಿಯಲ್ಲಿ ಮತ್ತಷ್ಟು ಜನ ಸಿಲುಕಿದ್ದು, ಅವರ ರಕ್ಷಣೆಗಾಗಿ ಕಾರ್ಯಾಚರಣೆ ಭರದಿಂದ ಸಾಗಿದೆ. ಇನ್ನು  ಸಾವನ್ನಪ್ಪಿದವರ ಪೈಕಿ ನಾಲ್ಕು ಮಕ್ಕಳು, 7 ಮಹಿಳೆಯರು, 11 ಮಂದಿ ಪುರುಷರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಡೆ ಸುಮಾರು 90 ಅಗಲ ಮತ್ತು 13 ಅಡಿ ಉದ್ದವಿತ್ತು ಎಂದು ಹೇಳಲಾಗಿದೆ. ಪ್ರಸ್ತುತ  ಗಾಯಾಳುಗಳನ್ನು ಸಮೀಪದ ಎಸ್ಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಜಸ್ತಾನ ಸಿಎಂ ವಸುಂಧರಾ ರಾಜೆ ಅವರು ಸಾವಿಗೀಡಾದವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಂತೆಯೇ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

No Comments

Leave A Comment