Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಡುಪಿ ನಗರ ಬಿಜೆಪಿ ಮಳಿಯಾಳಿ ಪ್ರಕೋಷ್ಠ ಉದ್ಘಾಟನೆ

ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಮಳಿಯಾಳಿ ಪ್ರಕೋಷ್ಠ ಉಧ್ಘಾಟನಾ ಕಾರ್ಯಕ್ರಮ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಯಿತು. ನಗರ ಬಿಜೆಪಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ನಗರ ಬಿಜೆಪಿ ಮಳಿಯಾಳಿ ಪ್ರಕೋಷ್ಠ ಸಂಚಾಲಕರಾಗಿ ವಿ.ಸಿ. ಬಿನೇಶ್ ಹಾಗೂ ಸಹ ಸಂಚಾಲಕರಾಗಿ ನವೀನ್ ಕುಮಾರ್ ಆಯ್ಕೆಯಾದರು.

ಬಿಜೆಪಿಯ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀಶ ನಾಯಕ್ ಬಿಜೆಪಿಯ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಸೋಜನ್ ಪಿ. ಜೇಮ್ಸ್, ಬಿಜೆಪಿ ಮಲಯಾಳಿ ಪ್ರಕೋಷ್ಠದ ಕೇಂದ್ರ ಮಂಡಳಿಯ ಉಪಾಧ್ಯಕ್ಷ ವಿ. ರವೀಂದ್ರನ್, ಜಿಲ್ಲಾ ಸಂಚಾಲಕರಾದ ಕೆ.ಪಿ ಶ್ರೀಶನ್, ಕೇಂದ್ರ ಕಮಿಟಿಯ ಸದಸ್ಯರಾದ ಕೆ.ಪಿ ಅಶೋಕನ್ ಹಾಗೂ ಹಲವಾರು ಮಳಿಯಾಳಿ ಕಾರ್ಯಕರ್ತರು ಉಪಸ್ಥಿತರಿದ್ದರು.

ದಿವ್ಯಾ ಅವರು ಕಾರ್ಯಕ್ರಮ ನಿರ್ವಹಿಸಿ, ಕೆ.ವಿ. ಕುಮಾರನ್‍ರವರು ಧನ್ಯವಾದ ಸಮರ್ಪಿಸಿದರು.

No Comments

Leave A Comment