Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಭಾರತದಲ್ಲಿ ಈ ಬಾರಿ ವಾಡಿಕೆಗಿಂತ ಉತ್ತಮ ಮಳೆ: ಹವಾಮಾನ ಇಲಾಖೆ ವರದಿ!

ನವದೆಹಲಿ: ಭಾರತದಲ್ಲಿ ಈ ಬಾರಿ ವಾಡಿಕೆಗಿಂತ ಉತ್ತಮ ಮಳೆಯಾಗದಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ವರದಿ ನೀಡಿದೆ.ಎಲ್ ನಿನೋ ಪರಿಣಾಮದಂದಾಗಿ ಭಾರತದಲ್ಲಿ ಈ ಬಾರಿ ಉತ್ತಮ ಮಳೆಯಾಗಲಿದ್ದು, ಉತ್ತರ ಭಾರತದ ರಾಜ್ಯಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೇಂದ್ರ ಹವಾಮಾನ ಇಲಾಖೆ  ಮುಖ್ಯಸ್ಥರು ಮಂಗಳವಾರ ಈ ಬಗ್ಗೆ ವರದಿ ನೀಡಿದ್ದು, ಈ ಬಾರಿ ಮಾನ್ಸೂನ್ ಮಳೆ ಉತ್ತಮವಾಗಿರಲಿದ್ದು, ಕೃಷಿ ಉದ್ಯಮಕ್ಕೆ ನೆರವಾಗಲಿದೆ. ಆ ಮೂಲಕ ಆರ್ಥಿಕಾಭಿವೃದ್ಧಿಯಲ್ಲೂ ಗಮನಾರ್ಹ ಬೆಳವಣಿಗೆ ಕಾಣಬಹುದಾಗಿದೆ ಎಂದು  ಹೇಳಿದ್ದಾರೆ.ಕಳೆದ ಬಾರಿ ಮಾನ್ಸೂನ್ ಮಳೆ ಶೇ.70 ಮಳೆ ಸುರಿಸಿತ್ತು. ಹೀಗಾಗಿ ಭತ್ತ, ಕಬ್ಬು, ಜೋಳ ಮತ್ತು ಹತ್ತಿಯಂತಹ ಬೆಳಗಳ ಇಳುವರಿಯಲ್ಲಿ ಇಳಿಕೆಯಾಗಿತ್ತು. ಆದರೆ ಈ ಬಾರಿ ಹವಾಮಾನದಲ್ಲಿ ಸಕಾರಾತ್ಮಕ ಬದಲಾವಣೆಯಾಗಿದ್ದು,  ಶೇ.96ರಷ್ಟು ಮಳೆಯನ್ನು ನಾವು ನಿರೀಕ್ಷಿಸಬಹುದಾಗಿದೆ. ಏಪ್ರಿಲ್ 18 ರ ಬಳಿಕದ ವಾತಾವರಣ ಮಳೆಗೆ ಪೂರಕವಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಕೆಜೆ ರಮೇಶ್ ತಿಳಿಸಿದ್ದಾರೆ.

ಮೇ-29 ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ, ಈ ವರ್ಷ ಉತ್ತಮ ಮುಂಗಾರು ಮಳೆ ನಿರೀಕ್ಷೆಈ ವರ್ಷದ ಮುಂಗಾರು ಮಳೆ ಮೇ 29 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ.  ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ  ಜೂನ್ 1ರಂದು ನೈರುತ್ಯ ಮುಂಗಾರು ಮಾರುತ ಕೇರಳ ಪ್ರವೇಶಿಸಲಿದೆ, ಅದಾದ ನಾಲ್ಕು ಅಥವಾ ಐದು ದಿನಗಳ ನಂತರ ಕರ್ನಾಟಕ ಒಳನಾಡು ಪ್ರವೇಶಿಸಲಿದೆ ಎಂದು ತಿಳಿಸಿದೆ.

No Comments

Leave A Comment