Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಭೀಕರ ಅಪಘಾತ: ಆಂಧ್ರ ಪ್ರದೇಶ ಸಚಿವರ ಪುತ್ರ ಸೇರಿ ಇಬ್ಬರ ಸಾವು!

ಹೈದರಾಬಾದ್: ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರ ಪ್ರದೇಶ ಸಚಿವ ಡಾ. ಪಿ ನಾರಾಯಣ ಅವರ ಪುತ್ರ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಆಂಧ್ರ ಪ್ರದೇಶ ಸಚಿವ ಡಾ.ಪಿ ನಾರಾಯಣ ಅವರ ಪುತ್ರ ನಿಷಿತ್ ಹಾಗೂ ಆತನ ಸ್ನೇಹಿತ ರಾಜಾ ರವಿಚಂದ್ರ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನ ಪ್ರತಿಷ್ಟಿತ ಜುಬಿಲಿ ಹಿಲ್ಸ್ ನಲ್ಲಿರುವ ರೋಡ್ ನಂಬರ್ 36ರಲ್ಲಿ ಅಪಘಾತ  ಸಂಭವಿಸಿದ್ದು, ನಿಷಿತ್ ಪ್ರಯಾಣಿಸುತ್ತಿದ್ದ ಬೆಂಜ್ ಕಾರು ವೇಗವಾಗಿ ಬಂದು ಮೆಟ್ರೋ ಪಿಲ್ಲರ್ ಗೆ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾದವು.

ಕೂಡಲೇ ಸ್ಥಳೀಯರ ಸಹಾಯದಿಂದ ನಿಷಿತ್ ಹಾಗೂ ರಾಜಾ  ರವಿವರ್ಮ ಅವರನ್ನು ಉಸ್ಮಾನಿಯಾ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಷಿತ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.ಇನ್ನು ಮತ್ತೋರ್ವ ರಾಜಾ ರವಿವರ್ಮಾ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಆತನಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಸ್ತುತ ಮಂತ್ರಿ ನಾರಾಯಣ ಅವರು ಲಂಡನ್ ಪ್ರವಾಸದಲ್ಲಿದ್ದು, ತಮ್ಮ ಪುತ್ರನ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೃತ ನಿಷಿತ್ ನಾರಾಯಣ ವಿದ್ಯಾಸಂಸ್ಥೆಯ  ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು

No Comments

Leave A Comment