Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಠಾಣಾಧಿಕಾರಿಯಿಂದ ಅತ್ಯಾಚಾರ; ಗುಪ್ತಾಂಗಕ್ಕೆ ಬೀರ್ ಬಾಟಲ್, ಖಾರದ ಪುಡಿ ಹಾಕಿದ ಕೀಚಕರು: ಜಮ್ಮು ಮಹಿಳೆ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಅಮಾನವೀಯ ನಡೆದಿದ್ದು, ಪೊಲೀಸ್ ಠಾಣೆಯಲ್ಲೇ ಠಾಣಾ ಅಧಿಕಾರಿ ತನ್ನನ್ನು ವಿವಸ್ತ್ರಗೊಳಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೇ ತನ್ನ ಗುಪ್ತಾಂಗಕ್ಕೆ ಬೀರ್ ಬಾಟಲ್ ಹಾಕಿ, ಕಾರದ ಪುಡಿ ಎರಚಿ ಮೃಗೀಯವಾಗಿ ವರ್ತಿಸಿದ್ದಾರೆ ಎಂದು ಜಮ್ಮು ಮಹಿಳೆ ಆರೋಪಿಸಿದ್ದಾರೆ.

ಸಿಎನ್ಎನ್-ನ್ಯೂಸ್ 18ನೊಂದಿಗೆ ಮಾತನಾಡಿದ ಸಂತ್ರಸ್ಥೆಯ ಪರ ವಕೀಲರು, ಇದು ದೆಹಲಿಯಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ರೀತಿಯಲ್ಲಿ ನಡೆದಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಘಟನೆಯ ಬಗ್ಗೆ ತಕ್ಷಣವೇ ಗಮನ ಹರಿಸುವಂತೆ ಪ್ರಧಾನಮಂತ್ರಿಗಳ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸೂಚಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕಳ್ಳತನದ ಆರೋಪದ ಮೇಲೆ ತನ್ನನ್ನು ಕಣಚಲ್ ಪೊಲೀಸ್ ಠಾಣೆಗೆ ಕರೆದೊಯ್ದು ಠಾಣಾಧಿಕಾರಿ ರಾಕೇಶ್ ಶರ್ಮಾ ಅವರು ಸುಮಾರು ಒಂದು ವಾರಗಳ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಜಮ್ಮುವಿನ ಕಣಚಲ್ ಪ್ರದೇಶದ ನಿವಾಸಿ 25 ವರ್ಷದ ಯುವತಿ ಆರೋಪಿಸಿದ್ದಾರೆ.

ಖಾಸಗಿ ವಾಹಿನಿಗೆ ಮಾತನಾಡಿದ ಮಹಿಳೆ ನನ್ನ ವಿರುದ್ಧ ನಕಲಿ ಕಳ್ಳತನದ ದೂರು ದಾಖಲಿಸಲಾಗಿದೆ. ಪೊಲೀಸ್ ವಶದಲ್ಲಿದ್ದ ವೇಳೆ ತನಗೆ ಊಟ ಕೊಟ್ಟಿಲ್ಲ ಮತ್ತು ನೀರು ಕೇಳಿದರೆ ಮೂತ್ರ ಕುಡಿಯುವಂತೆ ಗದರಿಸುತ್ತಿದ್ದರು. ಅಲ್ಲದೆ ತನ್ನ ತಾಯಿ, ಪತಿ ಮತ್ತು ಮಕ್ಕಳ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

No Comments

Leave A Comment