Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಅಫ್ಘಾನ್‌ನ ಮದರಸಾದಲ್ಲಿ ಬಾಂಬ್‌ ಸ್ಫೋಟ : 9 ಮಕ್ಕಳು ದಾರುಣ ಸಾವು

ಕಾಬೂಲ್‌: ಅಫ್ಘಾನಿಸ್ಥಾನದ ಪಾರ್ವಾನ್‌ ಪ್ರಾಂತ್ಯದ ಮದರಸಾವೊಂದರಲ್ಲಿ ಮಂಗಳವಾರ ಬಾಂಬ್‌ ಸ್ಫೋಟ ನಡೆದಿದ್ದು, 8 ಮಕ್ಕಳು ಸೇರಿ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮದರಸಾದ ಒಳೆಗೆ ಉಗ್ರರು ಬಾಂಬ್‌ ಇರಿಸಿದ್ದು ಸ್ಫೋಟದ ತೀವ್ರತೆಗೆ ಮಕ್ಕಳ ದೇಹಗಳು ಛಿದ್ರಗೊಂಡಿರುವುದಾಗಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸ್ಥಳಕ್ಕೆ ಪೊಲೀಸರು ಮತ್ತು ಭದ್ರತಾಪಡೆಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

 

No Comments

Leave A Comment