Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮೇವು ಹಗರಣದಿಂದ ಲಾಲೂ ಪ್ರಸಾದ್‌ಗೆ ಮುಕ್ತಿ ಇಲ್ಲ; ಪ್ರಕರಣಗಳ ಪ್ರತ್ಯೇಕ ವಿಚಾರಣೆ ನಡೆಸಲು ಸುಪ್ರೀಂ ಆದೇಶ

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ವಿರುದ್ಧದ ಕ್ರಿಮಿನಲ್‌ ಸಂಚು ಆರೋಪ ಕೈಬಿಡಲು ಸಾಧ್ಯವಿಲ್ಲ ಎಂದು  ಸುಪ್ರೀಂ ಕೋರ್ಟ್‌ ಹೇಳಿದೆ.

1000 ಕೋಟಿ ಮೊತ್ತದ ಮೇವು ಹಗರಣ ಪ್ರಕರಣದಿಂದ ಲಾಲೂ ಪ್ರಸಾದ್‌ ಯಾದವ್‌ ಅವರನ್ನು ಮುಕ್ತಗೊಳಿಸಿರುವ ಜಾರ್ಖಂಡ್‌ ಹೈಕೋರ್ಟ್‌ 2014ರ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ಮನವಿ ಸಲ್ಲಿಸಿತ್ತು.

ಸಿಬಿಐ ಮನವಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌  ಕ್ರಿಮಿನಲ್‌ ಸಂಚು ಆರೋಪದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದಿದ್ದು, ಸಿಬಿಐ ವಿಚಾರಣೆ ಮುಂದುವರಿಸಲು ಸೂಚಿಸಿದೆ.

ಆರ್‍‍ಜೆಡಿ ಮುಖಂಡ ಲಾಲೂ ಪ್ರಸಾದ್‌ ಮೇಲಿರುವ ನಾಲ್ಕು ಪ್ರಕರಣಗಳ ಪ್ರತ್ಯೇಕ ವಿಚಾರಣೆ ನಡೆಯುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿದೆ. ವಿಚಾರಣೆ ಪೂರ್ಣಗೊಳಿಸಲು 9 ತಿಂಗಳ ಗಡುವು ನೀಡಿದೆ.

No Comments

Leave A Comment