Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಯೋಧರ ಶಿರಚ್ಛೇದನಕ್ಕೆ ಪ್ರತೀಕಾರ: ಭಾರತೀಯ ಸೇನೆಯಿಂದ 2 ಪಾಕ್ ಸೇನಾ ಬಂಕರ್ ಧ್ವಂಸ

ನವದೆಹಲಿ: ಇಚ್ಚೀಚೆಗಷ್ಟೇ ಭಾರತೀಯ ಯೋಧರ ಹತ್ಯೆಗೈದು ಅವರ ಶಿರಚ್ಛೇದನ ಮಾಡಿದ್ದ ಪಾಕಿಸ್ತಾನ ಸೇನೆಯ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಇಂದು ಕ್ಷಿಪಣಿ ದಾಳಿ ಮಾಡಿ ಪಾಕ್ ಸೇನೆಯ ಎರಡು ಸೇನಾ ಬಂಕರ್ ಗಳನ್ನು ಧ್ವಂಸ ಮಾಡಿದೆ.

ಅಂತಾರಾಷ್ಟ್ರೀಯ ಗಡಿಯಲ್ಲಿದ್ದ ಪಾಕಿಸ್ತಾನದ ಎರಡು ಸೇನಾ ಬಂಕರ್ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ಮಾಡಿದ್ದು ಬಂಕರ್ ಗಳು ಸಂಪೂರ್ಣ ನಾಶವಾಗಿವೆ. ಇನ್ನು ಪಾಕ್ ಸೇನೆ ಇದೇ ಬಂಕರ್ ಗಳನ್ನು ಬಳಸಿಕೊಂಡು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನೆ ಮೇಲೆ ದಾಳಿ ನಡೆಸುತ್ತಿತ್ತು ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಕಳೆದ ವಾರದಿಂದ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನೆ ಮತ್ತು ಸಾರ್ವಜನಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಇದಕ್ಕೆ ಭಾರತೀಯ ಸೇನೆ ಸಹ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಸದ್ಯ ಪಾಕಿಸ್ತಾನದ ಎರಡು ಸೇನಾ ಬಂಕರ್ ಗಳನ್ನು ಭಾರತೀಯ ಸೇನೆ ನಾಶ ಮಾಡಿದ್ದು ಸಾವು ನೋವಿನ ವರದಿಯಾಗಿಲ್ಲ.

No Comments

Leave A Comment