ಇತಿಹಾಸ ಬರೆದ ಬಾಹುಬಲಿ 2; ಸಾವಿರ ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾನವದೆಹಲಿ:ನಿರೀಕ್ಷೆಯಂತೆ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಭಾರತ ಮತ್ತು ವಿದೇಶಗಳಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಏಪ್ರಿಲ್ 28ರಂದು ಜಾಗತಿಕವಾಗಿ ನಾಲ್ಕು ಭಾಷೆಗಳಲ್ಲಿ ತೆರೆ ಕಂಡಿದ್ದ ಬಾಹುಬಲಿ 2 ಸಿನಿಮಾ 10 ದಿನಗಳಲ್ಲಿ 1000 ಸಾವಿರ ಕೋಟಿ ರೂಪಾಯಿ ಗಳಿಸಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಬಾಹುಬಲಿ ಸಿನಿಮಾ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಭಾರತದ 8 ಸಾವಿರ ಸ್ಕ್ರೀನ್ ಗಳಲ್ಲಿ ತೆರೆ ಕಂಡಿದ್ದು, ದೇಶದಲ್ಲಿ 800 ಕೋಟಿ, ವಿದೇಶದಲ್ಲಿ 200 ಕೋಟಿ ರೂಪಾಯಿಗಿಂತಲೂ ಅಧಿಕ ರೂಪಾಯಿ ಬಾಕ್ಸಾಫೀಸ್ ನಲ್ಲಿ ಗಳಿಕೆ ಕಂಡಿದೆ.