Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಚೆನ್ನೈ: ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ಅಗ್ನಿ ದುರಂತ; ನಾಲ್ವರು ಬಲಿ

ಚೆನ್ನೈ : ಇಲ್ಲಿನ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ ಒಂದರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ  ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ; 15 ವಾಹನಗಳು ಸುಟ್ಟು ಕರಕಲಾಗಿವೆ. 

ಇಲ್ಲಿನ ವಡಪಳನಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ದುರ್ಘ‌ಟನೆ ಸಂಭವಿಸಿತು. ಅಪಾರ್ಟ್‌ಮೆಂಟ್‌ನ ವಾಹನಗಳನ್ನು ಪಾರ್ಕ್‌ ಮಾಡುವ ತಳ ಅಂತಸ್ತಿನಲ್ಲಿ ಮೊದಲಾಗಿ ಬೆಂಕಿ ಕಾಣಿಸಿಕೊಂಡಿತು. ಒಡನೆಯೇ ಅದು ಅಪಾರ್ಟ್‌ಮೆಂಟ್‌ಗಳಿಗೂ ಹಬ್ಬಿಕೊಂಡಿತು. ಹಾಗಾಗಿ ನಾಲ್ವರು ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟರು.

ಉಸಿರಾಟದ ತೊಂದರೆಗೆ ಒಳಗಾಗಿರುವ ಇತರ ಐವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿ ಅವಘಡಕ್ಕೆ  ಶಾರ್ಟ್‌ ಸರ್‌ಕ್ಯೂಟ್‌  ಕಾರಣವೆಂದು ತಿಳಿಯಲಾಗಿದೆ. ವಾಹನಗಳನ್ನು ಪಾರ್ಕ್‌ ಮಾಡಿಡಲಾದ ಪ್ರದೇಶದಲ್ಲಿ  15 ವಾಹನಗಳು ಸುಟ್ಟು ಕರಕಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 

No Comments

Leave A Comment