Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಅಮೆರಿಕದಲ್ಲಿ ಮಂಗಳೂರಿನ ದಂಪತಿಯ ಹತ್ಯೆ;ಪುತ್ರಿಯ ಮಾಜಿ ಲವರ್ ಕೃತ್ಯ

ಸ್ಯಾನ್‌ ಜೋಸ್‌ : ಮಂಗಳೂರು ಮೂಲದ ಮಹಿಳೆ ಮತ್ತು ಆಕೆಯ ಪತಿಯನ್ನು ಅಮೆರಿಕದ ಸ್ಯಾನ್‌ ಜೋಸ್‌ನ ಲಾರಾ ವಿಲ್ಲೆ ಲೇನ್‌ ಪ್ರದೇಶದಲ್ಲಿ  ಗುಂಡಿಟ್ಟು  ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಮೇ 3 ರ ರಾತ್ರಿ ನಡೆದಿದೆ. ಕೃತ್ಯವನ್ನು ದಂಪತಿಯ ಪುತ್ರಿಯ ಮಾಜಿ ಪ್ರಿಯಕರ ನಡೆಸಿದ್ದು ಆತನನ್ನೂ ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ.

ಇಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ನರೇನ್‌ ಪ್ರಭು ಮತ್ತು ಪತ್ನಿ ರೆನ್ಯಾರನ್ನು 24 ರ ಹರೆಯದ ಮಿರ್ಜಾ ಟಾಟ್ಲಿಕ್‌ ಎಂಬಾತ  ಮನೆಗೆ ನುಗ್ಗಿ ಗುಂಡಿಟ್ಟು ಹತ್ಯೆಗೈದಿದ್ದಾನೆ.

ರೆನ್ಯಾ ಅವರು ಮಂಗಳೂರಿನ ಬಜ್ಪೆಯ ಲೀಲಾ ಸೀಕ್ವೆರಾ ಅವರ ಪುತ್ರಿಯಾಗಿದ್ದು  ಮುಂಬಯಿಯಲ್ಲಿ ನೆಲೆಸಿದ್ದರು. ಪುತ್ರಿ ರೆಚೆಲ್‌ಳನ್ನು ನೋಡಲು ಅಮೆರಿಕಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ.

ರೆಚೆಲ್‌ ಮತ್ತು ಆರೋಪಿ ಮಿರ್ಜಾ ಡೇಟಿಂಗ್ ನಡೆಸುತ್ತಿದ್ದರು ಎಂದು ಹೇಳಲಾಗಿದ್ದು ಅವರ ಸಂಬಂಧ ಕಳೆದ ವರ್ಷ ಅಂತ್ಯಗೊಂಡಿದ್ದು, ಆ ಬಳಿಕ ಆತ ಮಾನಸಿಕ ಅಸ್ವಸ್ಥನಂತಾಗಿದ್ದು, ಹತಾಶನಾಗಿ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಇಬ್ಬರನ್ನೂ ಗುಂಡಿಕ್ಕಿ ಹತ್ಯೆಗೈದು ಮನೆಯಲ್ಲೇ ಕುಳಿತು 13 ವರ್ಷದ ಇನ್ನೋರ್ವ ಪುತ್ರನನ್ನು ಒತ್ತೆಯಾಳಾಗಿ ಇರಿಸಿ ರಚೆಲ್‌ಗೆ ಕರೆ ಮಾಡಿದ್ದ.  ಈ ವಿಚಾರವನ್ನು ಹತ್ಯೆಗೀಡಾದ ದಂಪತಿಯ 20 ರ ಹರೆಯದ ಇನ್ನೋರ್ವ ಪುತ್ರ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಮಿರ್ಜಾನನ್ನು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಒಪ್ಪದಿದ್ದಾಗ ಗುಂಡಿನ ದಾಳಿಯಲ್ಲಿ ಹತ್ಯೆಗೈದಿದ್ದಾರೆ. 13 ರ ಹರೆಯದ ಬಾಲಕ ಸುರಕ್ಷಿತವಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೃತ ದೇಹಗಳನ್ನು ಹಸ್ತಾಂತರಿಸುವ ಕುರಿತಾಗಿ ಅಮೆರಿಕ ಅಧಿಕಾರಿಗಳು ಕಾರ್ಯ ನಿರತರಾಗಿದ್ದಾರೆ.

No Comments

Leave A Comment